ಹಸಿದವರ ಹೊಟ್ಟೆ ತುಂಬಿಸುವುದೆ ದೇವನ ಪೂಜೆ:ಕಾಮಶೆಟ್ಟಿ ಚಿಕ್ಕಬಸೆ

ಬೀದರಃಜು.18: ಹಸಿದವರ ಹೊಟ್ಟೆ ತುಂಬಿಸುವುದೇ ನಿಜವಾದ ದೇವನ ಪೂಜೆ, ದೀನ-ದಲಿತ, ಬಡವ, ನಿರ್ಗತಿಕರ ಕಣ್ಣೀರು ಒರೆಸಿವುದು, ಅವರ ವಿದ್ಯಾಬ್ಯಾಸಕ್ಕೆ ತನ್ನ ಕೈಲಾದಷ್ಟು ಸಹಾಯ ಸಹಕಾರ ಮಾಡುವಂತಾದರೆ ಅದುವೇ ನಿಜವಾಗಿಯೂ ಆ ದೇವರ ಪೂಜೆ ಮಾಡಿದಂತೆಯೇ ಸರಿ ಎಂದು ಸೂರ್ಯ ನಮಸ್ಕಾರ ಸಂಘದ ಅಧ್ಯಕ್ಷರಾದ ಕಾಮಶೆಟ್ಟಿ ಚಿಕಬಸೆ ಅವರು ನುಡಿದರು.

ಬೀದರ ನಗರದ ನವಜೀವನ ವಿಶೇಷ ಮಕ್ಕಳ (ಬುದ್ದಿಮಾಂದ್ಯ) ವಸತಿಯುತ ಶಾಲೆಯಲ್ಲಿ ಸೂರ್ಯ ನಮಸ್ಕಾರ ಸಂಘದ ವತಿಯಿಂದ ಹಮ್ಮಿಕೊಂಡ ‘ನೊಂದವರ ಬಾಳಿಗೆ ಬೆಳಕು’ ಎಂಬ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಬಡ ನಿರ್ಗತಿಕ ಮಕ್ಕಳಿಗೆ ಉಪಹಾರ, ಅನ್ನ ಹಾಗೂ ದಿನಸಿ ಅಗತ್ಯ ವಸ್ತುಗಳನ್ನು ವಿತರಿಸಿ ಮಾತನಾಡುತಿದ್ದರು. ಅವರು ಮುಂದುವರೆದು ಮಾತನಾಡಿ ನಾವೆಲ್ಲ ದಿನನಿತ್ಯ ಅದೆಷ್ಟೋ ಖರ್ಚು ಮಾಡುತ್ತೇವೆ, ಹೊಟೆಲು, ಪಾರ್ಕು, ಸಿನಿಮಾ ಇತಾದಿ ಸ್ಥಳಗಳಲ್ಲಿ ಮನಬಂದಂತೆ ಅಪಾರ ಹಣ ಖರ್ಚು ಮಾಡುತ್ತೇವೆ. ಅದರೆ ಹಸಿದವರು ಹೊಟ್ಟೆಗೆ ಅನ್ನ ಕೇಳಿದಾಗ ಹಿಂಜರಿಯುತ್ತೇವೆ. ಇದು ಬದಲಾಗಬೇಕು. ನಮ್ಮ ದಿನನಿತ್ಯದ ಆದಾಯದಲ್ಲಿ ಒಂದಿಷ್ಟು ಭಾಗವಾದರೂ ಬಡವರಿಗಾಗಿ, ದಾನ-ದರ್ಮದ ಸಲುವಾಗಿ ಮೀಸಲಿಡುವ ಮೂಲಕ ನೊಂದವರ ಬಾಳಿಗೆ ಬೆಳಕಾಗಬೇಕು, ಈ ನಿಟ್ಟಿನಲ್ಲಿ ನಮ್ಮ ಸೂರ್ಯ ನಮಸ್ಕಾರ ಸಂಘವು ಶ್ರಮಿಸುತ್ತಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿವೇಕÉ ಅವರು ಮಾತನಾಡಿ ದಾನದ ಮಹತ್ವವನ್ನು ತಿಳಿಸಿಕೊಟ್ಟರು. ರಾಜಕುಮಾರ ಮಂಗಲಗಿ, ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಶ್ರೀಧರ ಜಾಧವ ಕಾರ್ಯಕ್ರಮ ನಿರೂಪಿಸಿದರು. ಶರಣು ಸ್ವಾಗತಿಸಿದರು. ಕೊನೆಯಲ್ಲಿ ಅನೀಲ ಸೋರಳ್ಳಿಕರ ವಂದಿಸಿದರು.

ಇದೇ ಸಂದರ್ಭದಲ್ಲಿ ಸಚ್ಚದಾನಂದ ಚಿದ್ರೆ ಅವರಿಂದ ಮಕ್ಕಳಿಗೆ ಸೂರ್ಯ ನಮಸ್ಕಾರ ಮಾಡಿಸಲಾಯಿತು. ರಾಜಕುಮಾರ ಅಲ್ಲೆ, ಅಪ್ಪಾರೆಡ್ಡಿ, ಸಂತೋಷ ಶೆರಿಕಾರ, ಬಸವರಾಜ ಮೂಲಗೆ, ನವನೀತ ಪಾಟೀಲ, ವಿಜಯಕುಮಾರ ರಾಥೋಡ, ಪ್ರದೀಪ ಪಾಂಚಾಳ, ಶಿವರಾಜ, ಶಿವಕುಮಾರ, ಶಿವಕುಮಾರ ಬೇಲೂರೆ, ಲೋಕೇಶ ಬಿರಾದಾರ, ಅನೀಲ ಬಿರಾದಾರ, ವಿನೀತ ಪಸಾರಗೆ, ಭದ್ರು ಸ್ವಾಮಿ, ಪ್ರಭು ಚಾರಿ, ರಾಜಕುಮಾರ ಪಾಟೀಲ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.