ಹಸಿದವರಿಗೆ ಅನ್ನ ನೀಡುತ್ತಿರುವ ಹಣ್ಣಿನ ವ್ಯಾಪಾರಿ

ಕುಕನೂರು, ಜೂ.6- ಕರೋನಾ 2 ನೇ ಅಲೆ ಹಿನ್ನೆಲೆಯಲ್ಲಿ ಲಾಕೌಡ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ಎಷ್ಟೋ ಕುಟುಂಬಗಳಿಗೆ ಸಂಘ ಸಂಸ್ಥೆಗಳು ಅಭಿಮಾನಿ ಬಳಗಗಳು ಜನಪ್ರತಿನಿಧಿಗಳು ಆಹಾರ ಧಾನ್ಯ ಹಣ್ಣು ಹಂಪಲು ಮಾಸ್ಕ್ ಸಾನಿಟೈಜರ್ ನಂತಹ ವಸ್ತುಗಳನ್ನು ಬಡ ನಿರ್ಗತಿಕರಿಗೆ ದಾನ ಧರ್ಮವಾಗಿ ನೀಡುತ್ತಿದ್ದಾರೆ. ಈಗ ಸಾಧಾರಣ ಹಣ್ಣಿನ ವ್ಯಾಪಾರ ಮಾಡುತ್ತಾ ಜೀವನ ಸಾಗಿಸುತ್ತಿರುವ ಕುಕನೂರು ಪಟ್ಟಣದಲ್ಲಿ ಜಿ.ಆರ್.ಬಿ. ಫ್ರುಟ್ಸ್ ಎಂದು ಹಣ್ಣಿನ ಅಂಗಡಿ ಮಾಲೀಕರಾದ ಮಸಬಹಂಚಿನಾಳದ ರಮೇಶ ಬನ್ನಿಗೋಳ ಅವರು ಕುಕನೂರು ಸೇರಿ ವಿವಿಧ ಹಳ್ಳಿಗಳಲ್ಲಿ ಬಡ ಕುಟುಂಬಗಳಿಗೆ ಬೆಳಗಿನ ಉಪಹಾರವನ್ನು ಜೊತೆಗೆ ಹಣ್ಣಿನ ಅಂಗಡಿಯ ತಾವು ಕೊಂಡುಕೊಂಡು ಬಂದ ಹಣ್ಣುಗಳನ್ನು ಹಸಿದವರಿಗೆ ಅನ್ನ ನೀಡುತ್ತಿರುವ ರಮೇಶ ಅವರ ಕಾರ್ಯವನ್ನು ಸಾರ್ವಜನಿಕರು ಪ್ರಶಂಸಿದ್ದಾರೆ. ರಮೆಶ ಅವರು ಹಣ್ಣು ಮಾರಲೆಂದು ಬೇರೆ ಊರುಗಳಿಗೆ ವಾಹನ ತೆಗೆದುಕೊಂಡು ಹೋದಾಗ ಅಲ್ಲಿಯ ಕೆಲವು ದಾನಿಗಳು ರಮೇಶ ಅವರಿಗೆ ಹಸಿದಾಗ ಗ್ರಾಮೀಣ ಜನರು ಅನ್ನ ನೀಡಿದ್ದನ್ನು ನೆನೆಪಿಸಿಕೊಂಡು ತಮಗೆ ಸಂಕಷ್ಟದ ಅರಿವಾಗಿ ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಏನಾದರೂ ಕೊಡುಗೆ ನೀಡಬೇಕೆಂದು ಅದಮ್ಯ ಆಸೆ ಇತ್ತು ಅದನ್ನು ಈಗ ಸಾರ್ಥಕ ಪಡಿಸಿಕೊಳ್ಳುತ್ತಿರುವುದಾಗಿ ತಿಳಿಸಿದರು.
ಜನರು ನೆಮ್ಮದಿಯಾಗಿರಬೇಕು, ಹಸಿವಿನಿಂದ ತೊಂದರೆಗೆ ಒಳಗಾಗಬಾರದೆಂಬುದು ನಮ್ಮ ಪ್ರಾರ್ಥನೆಯಾಗಿದೆ ದೇವರು ಕಷ್ಟ ನಿವಾರಿಸುವ ಶಕ್ತಿಯನ್ನು ಎಲ್ಲರಿಗೂ ನೀಡಲಿ ಎಂದು ಹೇಳುತ್ತಾರೆ. ಭಾನುವಾರದಿಂದ 8 ದಿನಗಳ ಕಾಲ ವಿವಿಧ ಗ್ರಾಮಗಳಲ್ಲಿನ ಕೊರೊನಾ ವಾರಿಯರ್ಸ್ ಗಳಿಗೆ, ಅಲೆಮಾರಿಗಳಿಗೆ ಹಣ್ಣು ಹಂಪಲು ವಿತರಣೆ ಕಾರ್ಯ ಆರಂಭಿಸಲಾಗಿದೆ ಇವರಿಗೆ ಸಾಥ್ ನೀಡಲು ಬಸವರಾಜ ಇಟಗಿ, ಸಿದ್ದು ಬನ್ನಿಗೋಳ, ರವಿ ಬೆಣಕಲ್, ಸುಭಾಸ ಪೂಜಾರ, ಹಂಚ್ಯಾಳಪ್ಪ ದೇವರ ಮನಿ, ಪರಶುರಾಮ ,ರಾಮಣ್ಣ ಬೆಣಕಲ್, ಮಾರುತಿ ಬ್ಯಾಡರ್, ಶರಣಪ್ಪ ವೀರಾಪುರ, ಯಮನೂರಪ್ಪ ವೀರಾಪುರ, ಮುತ್ತಣ್ಣ ದಾಸರ, ಹನುಮಂತ ವೀರಾಪುರ, ಮುತ್ತು ಇಟಗಿ, ಮುತ್ತು ಕೋನಾಪುರ, ನಾಗಪ್ಪ ವಾಲ್ಮೀಕಿ ನೇತೃತ್ವ ವಹಿಸಿದ್ದಾರೆ.