ಹಸಿದವರಿಗೆ ಅನ್ನ ನೀಡಿದ ಕಾರ್ಪೊರೇಟರ್


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.4: ನಗರದ ಅಂದ್ರಾಳನಲ್ಲಿ ಗೃಹಲಕ್ಷ್ಮಿ ನೋಂದಣಿ ಮಾಡಿಸಲು ಬಂದ ಜನತೆಯ ಹಸಿವನ್ನು ಅರಿತ ಸ್ಥಳೀಯ ಕಾರ್ಪೊರೇಟರ್ ರಾಮಾಂಜಿನೇಯಲು
ಊಟದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ನಗರದ 8 ನೇ ವಾರ್ಡಿನ ಜನತೆ  ಗೃಹಲಕ್ಷ್ಮೀ ಯೋಜನೆಗಾಗಿ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಈವರಗೆ 1200 ಜನರಿಗೆ ಲ ನೋಂದಣಿ ಮಾಡಿಸಲಾಗಿದೆ ಇನ್ನೂ ನೋಂದಣಿ ಕಾರ್ಯಕ್ರಮ ನಡೆಯುತ್ತಿದೆ.
ನೋಂದಣಿಗಾಗಿ ಇನ್ನೂ ಜನತೆ ಬೆಳಿಗ್ಗೆಯಿಂದ ಸಾಲಿನಲ್ಲಿ ನಿಂತು‌ ಕಾಯಬೇಕಿದೆ. ಹೀಗೆ ಕಾಯುತ್ತಿದ್ದವರು ಬೆಳಗಿನ ಜಾವವೇ ಬಂದು ಸಾಲಿನಲ್ಲಿ ನಿಂತು. ಹಸಿವಿನಿಂದ ಇದ್ದಾರೆಂಬುದನ್ನು ತಿಳಿದು ಕಾರ್ಪೊರೇಟರ್ ರಾಮಾಂಜಿನಿ  ನೋಂದಣಿ ಮಾಡಿಕೊಳ್ಳಲು ಬಂದವರಿಗೆ  ಊಟದ ವ್ಯವಸ್ಥೆ ಮಾಡಿದ್ದಾರೆ.
 ಬಾಲಾಜಿ ನಗರದಲ್ಲಿನ ಕಂಪ್ಯೂಟರ್ ಸೇವಾ ಕೇಂದ್ರದಲ್ಲಿ ಸಾಲಾಗಿ ಮಹಿಳೆಯರು ಕುಳಿತುಕೊಳ್ಳಲು ಆಸನ, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ನೋಂದಣಿ ಸಮಯದಲ್ಲಿ ಸರ್ವರ್ ಸಮಸ್ಯೆಯಿಂದ ಜಾಸ್ತಿ ಸಮಯ ಕಾಯಬೇಕಾಗಿದೆ.ಅದುದರಿಂದ ಅವರಿಗೆ ಉಚಿತವಾಗಿ ಮಧ್ಯಾಹ್ನ ಸಮಯದಲ್ಲಿ ಊಟ ನೀಡುತ್ತಿರುವುದಾಗಿ ರಾಮಾಂಜನೇಯುಲು ಹೇಳಿದ್ದಾರೆ.