
ಬೇಕಾಗುವ ಪದಾರ್ಥಗಳು:
ತುರಿದ ಕ್ಯಾರೆಟ್, ಕ್ಯಾಪ್ಸಿಕಮ್, ಬೀನ್ಸ್, ಎಲೆಕೋಸು, ಚಿಕ್ಕದಾಗಿ ಹೆಚ್ಚಿದ ಈರುಳ್ಳಿ, ಬೇಯಿಸಿದ ಆಲೂಗೆಡ್ಡೆ, ಉಪ್ಪು – ರುಚಿಗೆ ತಕ್ಕಷ್ಟು, ಗರಂ ಮಸಾಲ – ಅರ್ಧ ಚಮಚ, ಬೆಣ್ಣೆ, ಬ್ರೆಡ್, ಟೊಮೊಟೊ ಸಾಸ್ – ರುಚಿಗೆ ತಕ್ಕಷ್ಟು.
ವಿಧಾನ:
ಕ್ಯಾರೆಟ್, ಕ್ಯಾಪ್ಸಿಕಮ್, ಬೀನ್ಸ್, ಎಲೆಕೋಸು, ಈರುಳ್ಳಿ – ಇವುಗಳನ್ನು ಬೇಯಿಸಿ, ಪುಡಿ (ಬೇಯಿಸಿರುವ) ಮಾಡಿದ ಆಲೂಗೆಡ್ಡೆ, ಉಪ್ಪು, ಗರಂ ಮಸಾಲ ಸೇರಿಸಿ, ಕಲೆಸಿ ಪಲ್ಯ ತಯಾರಿಸಬೇಕು. ಬ್ರೆಡ್‌ಗೆ ಬೆಣ್ಣೆ ಸವರಿ ೨ ಕಡೆ ಬಿಸಿಮಾಡಿ. ನಂತರ ಮೇಲೆ ಟೊಮೊಟೊ ಸಾಸ್ ಸವರಿ, ಹಸಿ ತರಕಾರಿ ಪಲ್ಯ ಇಟ್ಟು ಮೇಲೆ ಬಿಸಿಮಾಡಿದ ಇನ್ನೊಂದು ಬ್ರೆಡ್ ಇಟ್ಟು ತಿನ್ನಬಹುದು. ಇಲ್ಲವೇ ರೋಸ್ಟ್ ಮಾಡಿಯೂ ಸೇವಿಸಬಹುದು.