ಹಸರಗುಂಡಗಿ: ಸ್ವಚ್ಛ ಭಾರತ ಅಭಿಯಾನ ಉಪನ್ಯಾಸ

ಅಫಜಲಪುರ,ಜೂ 26:ತಾಲೂಕಿನ ಹಸರಗುಂಡಗಿ ಗ್ರಾಪಂ ಹಾಗೂ ಸಾಮ್ರಾಟ್ ಅಶೋಕ ಚಾರಿಟೇಬಲ್ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆ ಅಡಿಯಲ್ಲಿ ಐಇಸಿ ಚಟುವಟಿಕೆಗಳ ಕುರಿತು ಹಸರಗುಂಡಗಿಯ ಸರಕಾರಿ ಪ್ರೌಢಶಾಲೆಯಲ್ಲಿ ಉಪನ್ಯಾಸ ಹಾಗೂ ಪ್ರಮಾಣ ವಚನ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಶಾಲೆಯ ಮುಖ್ಯ ಗುರು ಶಿವಾನಂದ್ ಗುಡೋಡಗಿ ಅವರು ಚಾಲನೆ ನೀಡಿದರು.ಟ್ರಸ್ಟ್ ಅಧ್ಯಕ್ಷ ಯಲ್ಲಪ್ಪ ದೊಡ್ಡಮನಿ ಮಾತನಾಡಿ,ಸ್ವಚ್ಛ ಭಾರತ ಅಭಿಯಾನ ಯಶಸ್ವಿಯಾಗಬೇಕಾದರೆ ವಿದ್ಯಾರ್ಥಿಗಳು ಅದರ ನಾಯಕತ್ವವನ್ನು ವಹಿಸಿಕೊಳ್ಳಬೇಕು. ಇಂದು ಮಳೆ ಬರದೇ ಇರುವುದಕ್ಕೆ ಮರಗಳ ಕೊರತೆ ಕಾರಣ.ಅದಕ್ಕಾಗಿ ವಿದ್ಯಾರ್ಥಿಗಳು ಒಂದೊಂದು ಗಿಡವನ್ನು ನೆಟ್ಟು ಪರಿಸರ ಬೆಳವಣಿಗೆಗೆ ಕಾರಣಿಭೂತರಾಗಬೇಕೆಂದು ಕೇಳಿಕೊಂಡರು. ಕೊನೆಯಲ್ಲಿ ಎಲ್ಲರೂ ವಾಗ್ದಾನ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಯಲ್ಲಾಲಿಂಗ ಕಿರೆಸಾವಳಗಿ, ಸಹ ಶಿಕ್ಷಕರಾದ ಪ್ರೇಮಲತಾ ಬಿ.ವಿ, ಸಿದ್ದು ಪೂಜಾರಿ, ನಾಗಲಾಂಬಿಕ, ಸೋಮಯ್ಯ ಮಠ, ಕ್ಷೇತ್ರ ಅಧಿಕಾರಿ ಶಶಿಧರ್ ಬಳೆ, ದೇವರಾಜ್ ಸೇರಿದಂತೆ ಅನೇಕರಿದ್ದರು. ರಾಜಶೇಖರ್ ಬಿರಾದಾರ ನಿರೂಪಿಸಿ ವಂದಿಸಿದರು.