ಹಸರಗುಂಡಗಿ ಸರಕಾರಿ ಪ್ರೌಢ ಶಾಲೆಗೆ ದಾನಿಗಳಿಂದ ನೂರೊಂದು ಊಟದ ತಟ್ಟೆ ಕಾಣಿಕೆ

ಅಫಜಲಪುರ: ಅ.30:ತಾಲೂಕಿನ ಹಸರಗುಂಡಗಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಮಾಡುವ ವಿದ್ಯಾರ್ಥಿಗಳಿಗೆ ಗ್ರಾಮದ ಮುಖಂಡರಾದ ಮಹಾಂತಯ್ಯ ಸ್ವಾಮಿ, ಶರಣು ಜವಳಗಿ, ಮಂಜೂರ ಪಟೇಲ್, ಸಾಧಿಕ್ ಮತ್ತು ರಾಜು ಹಡಪದ ಸೇರಿಕೊಂಡು ಶಾಲಾ ಮಕ್ಕಳಿಗೆ ಅನುಕೂಲವಾಗಲೆಂದು ಒಂದು 101 ಊಟದ ತಟ್ಟೆ ಮತ್ತು 101 ಹಾಲು ಕುಡಿಯಲು ಗ್ಲಾಸ್‍ಗಳು ಕಾಣಿಕೆಯಾಗಿ ಶಾಲೆಯ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಮುಖ್ಯಗುರುಗಳಿಗೆ ನೀಡಿದರು.

ಈ ಕುರಿತು ಮುಖ್ಯಗುರು ಶಿವಾನಂದ ಗುಡೋಡಗಿ ಮಾತನಾಡಿ ಗ್ರಾಮೀಣ ಭಾಗಗಳಲ್ಲಿ ಸರಕಾರಿ ಶಾಲೆಗಳ ಬೆಳವಣಿಗೆಗೆ ಗ್ರಾಮಸ್ಥರ ಸಹಕಾರ ಬಹಳ ಮುಖ್ಯವಾಗಿದೆ. ಎಲ್ಲರಿಗೂ ಶೀಕ್ಷಣ ದೊರಕಲೆಂದು ಸರಕಾರ ಮಧ್ಯಾಹ್ನದ ಬಿಸಿಯೂಟ ಸೇರಿ ಸಾಕಷ್ಟು ಸೌಕರ್ಯಗಳು ನೀಡುತ್ತಿದೆ ಅದರಲ್ಲಿಯೂ ಗ್ರಾಮಸ್ಥರು ಇಂದು ಶಾಲಾ ಮಕ್ಕಳಿಗಾಗಿ ನೂರೊಂದು ಊಟದ ತಟ್ಟೆ ಮತ್ತು ಗ್ಲಾಸ್‍ಗಳು ನೀಡಿರುವುದು ಶ್ಲಾಘನೀಯವಾದದ್ದು ಗ್ರಾಮಸ್ಥರ ಸಹಕಾರದಿದ ಸರಕಾರಿ ಶಾಲೆಗಳು ಮತ್ತಷ್ಟು ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.

ಮುಖಂಡರಾದ ಶಿವು ಬಳಗುಂಪಿ ಸಿಬ್ಬಂದಿಗಳಾದ ರಾಜಶೇಖರ ಬಿರಾದಾರ, ಉಮಾದೇವಿ ಪಾಟೀಲ, ಗಾಯತ್ರಿ ಬಿರಾದಾರ, ಪ್ರೇಮಲತಾ, ಕವಿತಾ, ನಾಗಲಾಂಬಿಕಾ ಸೇರಿದಂತೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಇದ್ದರು.