
ಡೆಹ್ರಾಡೂನ್,ಮೇ.೩- ಚಾರ್ ಧಾಮಗಳಲ್ಲಿ ಒಂದಾದ ಉತ್ತರಖಾಂಡದ ಕೇದಾರನಾಥದಲ್ಲಿ ನಿರಂತರ ಹಿಮಪಾತದಿಂದಾಗಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ನೀಡಿರುವ ಹಿನ್ನೆಲೆಯಲ್ಲಿ ಯಾತ್ರೆ ಇಂದು ಸ್ಥಗಿತಗೊಳಿಸಲಾಗಿದೆ.
ರಿಷಿಕೇಶದಲ್ಲಿರುವ ಪ್ರಯಾಣಿಕರ ನೋಂದಣಿ ಕೇಂದ್ರದಲ್ಲಿ ಬದರಿನಾಥ, ಗಂಗೋತ್ರಿ ಮತ್ತು ಯಮುನೋತ್ರಿ ಧಾಮಕ್ಕೆ ಮಾತ್ರ ನೋಂದಣಿ ಮಾಡಲಾಗುತ್ತಿದೆ ಎಂದು ರುದ್ರ ಪ್ರಯಾಗ್ ಜಿಲ್ಲಾಧಿಕಾರಿ ಮಯೂರ್ ದೀಕ್ಷಿತ್ ತಿಳಿಸಿದ್ದಾರೆ.
ಕೇದಾರನಾಥ ಧಾಮ ರಾಜ್ಯದ ಚಾರ್ ಧಾಮಗಳಲ್ಲಿ ಒಂದಾಗಿದೆ. ಈ ಪ್ರದೇಶದಲ್ಲಿ ಆರೆಂಜ್ ಅಲರ್ಟ್ ಕೂಡ ನೀಡಲಾಗಿದೆ. ಕೇದಾರನಾಥ ಯಾತ್ರಾರ್ಥಿಗಳ ನೋಂದಣಿಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಕೇದಾರನಾಥದಲ್ಲಿ ಹವಾಮಾನ ವೈಪರೀತ್ಯ ಹಾಗೂ ಹಿಮಪಾತದಿಂದಾಗಿ ಕೇದಾರನಾಥ ಯಾತ್ರಾರ್ಥಿಗಳ ನೋಂದಣಿ ಸ್ಥಗಿತಗೊಳಿಸಲಾಗಿದೆ. ಹವಾಮಾನ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ನೋಂದಣಿ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ರಿಷಿಕೇಶದಲ್ಲಿರುವ ಪ್ರಯಾಣಿಕರ ನೋಂದಣಿ ಕೇಂದ್ರದಲ್ಲಿ ಬದರಿನಾಥ್, ಗಂಗೋತ್ರಿ ಮತ್ತು ಯಮುನೋತ್ರಿ ಧಾಮಕ್ಕೆ ಮಾತ್ರ ನೋಂದಣಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಹವಾಮಾನ ಇಲಾಖೆ, ಮುಂದಿನ ೨-೩ ದಿನಗಳ ಕಾಲ ಹಿಮಾಲಯದ ಎತ್ತರದ ಪ್ರದೇಶಗಳಲ್ಲಿ ಮಳೆ ಮತ್ತು ಹಿಮಪಾತದ ಎಚ್ಚರಿಕೆ ನೀಡಿದೆ. ಕೇದಾರನಾಥ ಧಾಮಕ್ಕೆ ಭೇಟಿ ನೀಡಲು ಬರುವ ಯಾತ್ರಾರ್ಥಿಗಳ ಸುರಕ್ಷತೆಗಾಗಿ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಹವಾಮಾನ ಇಲಾಖೆ ನಾಳೆವರೆಗೆ ಉತ್ತರಾಖಂಡದ ಎತ್ತರದ ದೇವಾಲಯಗಳಿಗೆ ಇದೇ ರೀತಿಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಮುನ್ಸೂಚನೆ ಮತ್ತು ಯಾತ್ರಾರ್ಥಿಗಳು, ವಿಶೇಷವಾಗಿ ಕೇದಾರನಾಥಕ್ಕೆ ಹೋಗುವವರು, ಸ್ಥಳದಲ್ಲೇ ಉಳಿಯಲು ಮತ್ತು ಹವಾಮಾನ ಸುಧಾರಿಸಿದ ನಂತರ ಮಾತ್ರ ತಮ್ಮ ಮುಂದಿನ ಪ್ರಯಾಣ ಮುಂದುವರಿಸಲು ಸಲಹೆ ನೀಡಿದ್ದಾರೆ.
ನಾಳೆವರೆಗೆ ಯಾತ್ರೆಗೆ ತಡೆ
“ರಾಜ್ಯದ ಕೆಲವು ಭಾಗಗಳಲ್ಲಿ ಭಾರೀ ಮಳೆ ಮತ್ತು ಹಿಮದ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆಯ ಹಿನ್ನೆಲೆಯಲ್ಲಿ ಯಾತ್ರಾರ್ಥಿಗಳ ಸುರಕ್ಷತೆಗಾಗಿ ಕೇದಾರನಾಥ ಯಾತ್ರೆಯನ್ನು ನಾಳೆಯವರೆಗೆ ತಡೆಹಿಡಿಯಲಾಗಿದೆ” ಎಂದು ರುದ್ರಪ್ರಯಾಗ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ನಂದನ್ ಸಿಂಗ್ ರಾಜವರ್ ತಿಳಿಸಿದ್ದಾರೆ.
ಹವಾಮಾನ ಸುಧಾರಿಸುವವರೆಗೆ ಗೌರಿಕುಂಡ್ ಮತ್ತು ಸೋನ್‌ಪ್ರಯಾಗದಲ್ಲಿ ಕಾಯಲು ಯಾತ್ರಾರ್ಥಿಗಳಿಗೆ ತಿಳಿಸಲಾಗಿದೆ ಮತ್ತು ಅವರು ತಮ್ಮ ಪ್ರಯಾಣವನ್ನು ಪುನರಾರಂಭಿಸಬಹುದು ಎಂದು ಅವರು ಹೇಳಿದ್ದಾರೆ.