ಹವಾಮಾನ ವೈಪರೀತ್ಯ ಕಡಲೆಗೆ ಕೀಟ ಕಾಟ ಅನ್ನದಾತರಲ್ಲಿ ಆತಂಕ

ಮಸ್ಕಿ,ಜ.೬- ಕಳೆದ ಎರಡ್ಮೂರು ದಿನಗಳಿಂದ ಹವಾಮಾನ ವೈಪರೀತ್ಯ ಗೊಂಡು ಮೋಡ ಕವಿತ ವಾತಾವರಣ ಕಂಡು ಬಂದಿರುವ ಕಾರಣ ಕಡಲೆ ಬೆಳೆಗೆ ಕೀಟ ಕಾಟ ಶುರುವಾಗಿರುವ ಹಿನ್ನೆಲೆಯಲ್ಲಿ ಅನ್ನದಾತರು ಆತಂಕ ಗೊಂಡಿದ್ದಾರೆ.
ಕಡಲೆ ಕಾಯಿ ಕಾಳು ಕಟ್ಟುವ ವೇಳೆ ಮೋಡ ಕವಿದ ವಾತಾವರಣದ ಹಿನ್ನೆಲೆಯಲ್ಲಿ ಕಡಲೆ ಕಾಯಿ ಗಳಿಗೆ ಕೀಟಗಳು ಕೊರೆದು ಹಾಳು ಮಾಡುತ್ತಿವೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ತಾಲೂಕಿನ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ ೩,೩೬೦ ಹೇಕ್ಟರ್ ಪ್ರದೇಶದಲ್ಲಿ ಕಡಲೆ ಬಿತ್ತನೆ ಮಾಡಲಾಗಿದೆ ಬೆಳಗ್ಗೆ ಜಮೀನುಗಳಲ್ಲಿ ದಟ್ಟ ಮಂಜು ಆವರಿಸಿ ಕೊಂಡ ನಂತರ ಬಿಸಿಲು ತಾಪ ಮಾನಕ್ಕೆ ಕಡಲೆ ಬೆಳೆ ಭರ್ಜರಿ ಯಾಗಿ ಬೆಳೆದಿತ್ತು ಕಳೆದ ಎರಡ್ಮೂರು ದಿನಗಳಿಂದ ಮೋಡ ಕವಿದ ವಾತಾವರಣ ಜತೆ ಹೊಲಗಳಲ್ಲಿ ಜಿನಿ, ಜಿನಿ ಮಳೆ ಯಾಗುತ್ತಿರುವ ಕಾರಣ ಕಡಲೆ ಬೆಳೆಗೆ ಕೀಟಕಾಟ ಶುರು ವಾಗಿದೆ.
ಕೀಟ ನಿಯಂತ್ರಣಕ್ಕೆ ಈಗಾಗಲೆ ಮೂರ್‍ನಾಲ್ಕು ಸಲ ಕೀಟ ನಾಶಕ ಔಷಧಿ ಸಿಂಪಡಿಸಿದ್ದ ರೈತರಿಗೆ ಕಡಲೆ ಕಾಯಿ ಕಾಳು ಕಟ್ಟುತ್ತಿರುವ ವೇಳೆ ಮೋಡ ಕವಿದ ವಾತಾವರಣ ರೈತರಿಗೆ ಶಾಪ ವಾಗಿ ಪರಿಣಮಿಸಿದೆ ಇದೆ ವಾತಾವರಣ ಮುಂದು ವರೆದರೆ ಭರ್ಜರಿ ಯಾಗಿ ಬೆಳೆದಿರುವ ಜೋಳದ ಬೆಳೆಗೆ ಲದ್ದಿ ಹುಳು ಕಾಟ ಶುರುವಾಗುವ ಆತಂಕ ಎದುರಾಗಿದೆ ಹವಾಮಾನ ವೈಪರೀತ್ಯ ಅನ್ನದಾತರಿಗೆ ಸಂಕಷ್ಟ ತಂದಿದೆ.
(೬,ಜ.ಎಂಎಸ್ಕೆ ಪೋಟೋ೦೧)