ಹವಾಮಾನ ಪರಿಸರ ಶಿಕ್ಷಣ ಬಗ್ಗೆ ಅರಿತುಕೊಳ್ಳಿ:ಡಾ.ಬಾಬು ಕರೆ

ಜೇವರ್ಗಿ:ಮಾ.26: ಹವಾಮಾನ ಮತ್ತು ಪರಿಸರ ಶಿಕ್ಷಣದ ಬಗ್ಗೆ ವಿಧ್ಯಾರ್ಥಿಗಳು ಅಷ್ಟೇ ಅಲ್ಲ,ಇಡೀ ಮನುಕುಲವೇ ಅರಿತು ಕೊಳ್ಳಬೇಕಾದ ಅನಿವಾರ್ಯತೆ ಇಂದು ಎದುರಾಗಿದೆ.ಹಾಗಾಗಿ ಅದರಲ್ಲೂ ವಿದ್ಯಾರ್ಥಿಗಳಂತು ಮೊದಲು ಹವಾಮಾನ ಮತ್ತು ಪರಿಸರ ಶಿಕ್ಷಣದ ಬಗ್ಗೆ ತಿಳಿದು ಕೊಳ್ಳುವುದು ಅತ್ಯವಶ್ಯಕ ಎಂದು ಕೇಂದ್ರೀಯ ವಿವಿಯ ಪ್ರಾಧ್ಯಾಪಕ ಡಾ. ಬಾಬು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಪಟ್ಟಣದಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಜೇವರ್ಗಿ ಹಾಗೂ ಸಿಇಇ ಮತ್ತು ಯುನಿಸೆಫ್ ಇವುಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡ, ಒಂದು ದಿನದ ಹವಮಾನ ಮತ್ತು ಪರಿಸರ ಶಿಕ್ಷಣ ಕುರಿತಾದ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದಿನ ಮನು ಕುಲದ ಮಹಾದಾಸೆಗೆ ಹವಾಮಾನ ಮತ್ತು ಪರಿಸರದಲ್ಲಿ ವ್ಯತಿರಿಕ್ತವಾಗಿ ಬದಲಾವಣೆ ಅಪಾರ ಪ್ರಮಾಣದಲ್ಲಿ ಕಂಡು ಬರುತ್ತಿದೆ.ಇದು ಇದೆ ರೀತಿ ಮುಂದುವರೆದರೇ,ಅದಕ್ಕೆ ತಕ್ಕ ಪರಿಣಾಮ ಎದುರಿಸಬೇಕಾದಿತು ಎಂದು ಡಾ.ಬಾಬು ಆತಂಕ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ಡಾ. ಪ್ರಕಾಶ್ ಹಾಗೂ ಡಾ. ನಿತಿನ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದ ಸಂಯೋಜಕರಾಗಿ ದಿಲೀಪ್ ಶರ್ಮ ಯೂನಿಸಿಫ್ ಕನ್ಸಲ್ಟೆಂಟ್, ಡಾ. ಶೃತಿ, ಅಇಇ ಬೆಂಗಳೂರು ಹಾಗೂ ಮಿಸ್. ಅಂಜಲಿ ಅಇಇ ಬೆಂಗಳೂರು ಭಾಗವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಕರಿಗುಳೇಶ್ವರ್ ವಹಿಸಿದ್ದರು. ಅಲ್ಲದೆ ತಾಲೂಕಿನ ವಿವಿಧ ಪದವಿ ಕಾಲೇಜುಗಳಾದ ಮಹಾಲಕ್ಷ್ಮಿ ಪದವಿ ಕಾಲೇಜು, ಸಿದ್ದಲಿಂಗ ಪದವಿ ಕಾಲೇಜು, ಹಾಗೂ ಬಸವಶ್ರೀ ಪದವಿ ಕಾಲೇಜು ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು ಹಾಗೂ ಗುರುವರ್ಯರು ಭಾಗವಹಿಸಿದ್ದರು.