ಹಳ್ಳೆರೋಗಕ್ಕೆ ಬಲಿಯಾದ ದೇಶಿತಳಿ ಆಕಳು.

ಕೂಡ್ಲಿಗಿ. ನ. 28 :- ಹಾಲು ಉತ್ಪಾದನೆ ಹಾಗೂ ಮಾರಾಟ ಮಾಡುವ ನಿಟ್ಟಿನಲ್ಲಿ ವಿದೇಶಿಯ ತಳಿಯ ಜರ್ಸಿ ಜಾನುವಾರುಗಳಿಗೆ ಮಾರುಹೋದ ಜನತೆ ಇಂದು ದೇಶಿಯ ತಳಿಯ ಜಾನುವಾರುಗಳನ್ನು ಸಾಕುವುದನ್ನೇ ಮರೆತಿದ್ದು ಇಂತಹ ವಾತಾವರಣದಲ್ಲಿಯು   ತಾಲೂಕಿನ ಸೂಲದಹಳ್ಳಿ ಬಸಪ್ಪ ಎಂಬುವವರು 50ಕ್ಕೂ ಹೆಚ್ಚು ದೇಶೀತಳಿ ಆಕಳುಗಳು ಸಾಕಿದ್ದು ಅದರಲ್ಲಿ ಒಂದು   ನಿನ್ನೆ ಮಧ್ಯಾಹ್ನ ಹಳ್ಳೆರೋಗಕ್ಕೆ ಎರಡು ಬಾರಿ    ಕರು ಹಾಕಿದ ಆಕಳು ಬಲಿಯಾಗಿದೆ.
ಮಕ್ಕಳಿಗಿಂತಲೂ ಹೆಚ್ಚು ಪ್ರೀತಿ ತೋರುವ ಸೂಲದಹಳ್ಳಿ ಜಿ. ಬಸಪ್ಪನಿಗೆ ಈಗ ಅರವತ್ತರ ಹರೆಯ ಆದರೂ ದೇಶಿತಳಿಯ ಜಾನುವಾರಗಳ ಸಾಕುವ ಪ್ರೀತಿ ಕಡಿಮೆಯಾಗಿಲ್ಲ ನಿನಗೆ ವಯಸ್ಸಾಗಿದೆ ಈ ದನಗಳನ್ನು ಮೇಯಿಸಿಕೊಂಡು ಬರಲು ಆಗುವುದಿಲ್ಲ ನೌಕರಿಯಿಂದ ನಾವು ಬೇರೆ ಬೇರೆ ಊರಿನಲ್ಲಿ ಇರುತ್ತೇವೆ ಈ ದನಗಳನ್ನು ಮಾರಿಬಿಡು ಎಂದು ನೌಕರಿಯಲ್ಲಿರುವ ಮಕ್ಕಳು ತಂದೆ ಬಸಪ್ಪನಿಗೆ ಹೇಳಿದರೆ ನೀವು ಇಂದು ಕಾರು ಬೈಕುಗಳಲ್ಲಿ ಓಡಾಡಬಹುದು ನೌಕರಿ ಸಹ ಸಿಕ್ಕಿರಬಹುದು ನೀವು ವಿದ್ಯಾವಂತರಾಗಲು ಅದಕ್ಕೆ ಈ ಗೋಮಾತೆಯರ ಆಶೀರ್ವಾದ ಎಂಬುದನ್ನು ಮರೆಯಬೇಡಿ ಎಂದು 20ವರ್ಷದ ಹಿಂದೆಯೇ ಪತ್ನಿಯನ್ನು ಕಳಕೊಂಡು ಗೋಮಾತೆಯ ಹಾಲು ಮೊಸರಿನಲ್ಲಿ ಆರು ಮಕ್ಕಳನ್ನು ಸಾಕಿ ಸಲುಹಿದ್ದೇನೆ ನಿಮ್ಮನ್ನು ವಿದ್ಯಾವಂತರನ್ನಾಗಿ ಮಾಡಿದ್ದೇನೆ ನಾನು ಜೀವಂತ ಇರೋವರೆಗೂ ಒಂದು ಆಕಳನ್ನು ಮಾರಲು ಬಿಡಲಾರೆ ಎಂದು ಮಕ್ಕಳಿಗೆ ಖಡಕ್ ಉತ್ತರ ನೀಡುತ್ತಾರೆ 50ಕ್ಕೂ ಹೆಚ್ಚು ದೇಶಿತಳಿ ಗೋರಕ್ಷಕ ಬಸಪ್ಪ. 
 ಜಾನುವಾರುಗಳಿಗೆ ಏನಾದರು ಆದರೆ ತನಗೆ ಆಗಿಬಿಟ್ಟಿದೆ ಏನೋಅನ್ನುವ  ರೀತಿಯಲ್ಲಿ ವ್ಯಥೆಪಡುವ ಬಸಪ್ಪ ಇತ್ತೀಚಿಗೆ ಜಾನುವಾರುಗಳಿಗೆ ಕಾಣಿಸಿಕೊಂಡ ಕಾಲುಬೇನೆ ರೋಗದಿಂದ ಚಿಕಿತ್ಸೆ ಕೊಡಿಸುವ ಮೂಲಕ ಜಾನುವಾರುಗಳನ್ನು ರಕ್ಷಿಸಿಕೊಳ್ಳಲಾಯಿತು ಆದರೆ ಕಳೆದೆರಡು ದಿನದ ಹಿಂದೆ ಒಂದು ಆಕಳಿಗೆ ಹಳ್ಳೆರೋಗ ಕಾಣಿಸಿಕೊಂಡಿದ್ದು ಪಶುವೈದ್ಯರ ಕೊರತೆಯಿಂದ ಅವರನ್ನು ಕರೆಸಿ ನಿನ್ನೆ ಚಿಕಿತ್ಸೆ ಕೊಡಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮಧ್ಯಾಹ್ನ ಹಳ್ಳೆರೋಗಕ್ಕೆ ಒಂದು ಆಕಳು ಬಲಿಯಾಗಿದ್ದು ಇದರಿಂದ ನೊಂದ ಬಸಪ್ಪನ ಆಕ್ರಂದನ ಮುಗಿಲುಮುಟ್ಟಿತ್ತು ಇದನ್ನು ಕಂಡ ಮಕ್ಕಳು ರೈತರ ಬದುಕಿಗೆ ಆಸರೆಯಾದ ಜಾನುವಾರುಗಳಿಗೆ ಯಾವುದೇ ಕಾಯಿಲೆ ಅಥವಾ ಏನಾದರು ಆದಲ್ಲಿ ತಕ್ಷಣ ಅವುಗಳ ತಪಾಸಣೆ ಮತ್ತು ಚಿಕಿತ್ಸೆಗೆ ಪಶುಆಸ್ಪತ್ರೆ ಇರುವ ಕೂಡ್ಲಿಗಿ ತಾಲೂಕಿನ  ಆಸ್ಪತ್ರೆಗಳಲ್ಲಿ  ಪಶುವೈದ್ಯಾಧಿಕಾರಿಗಳು ತಕ್ಷಣ ಸಿಕ್ಕಲ್ಲಿ  ರೈತನ ಬೆನ್ನೆಲುಬಾದ ಜಾನುವಾರುಗಳು ಬದುಕುಳಿಯಬಲ್ಲವು ಎಂದು ಸೂಲದಹಳ್ಳಿಯ ರೈತ ಬಸಪ್ಪನ ಮಗನಾದ ಮಾರೇಶ ತಾಲೂಕಿನ ಪಶುಆಸ್ಪತ್ರೆ ಇರುವ ಆಸ್ಪತ್ರೆಗಳಲ್ಲಿ ಪಶುವೈದ್ಯರನ್ನು ನೇಮಿಸಿ ಬಡ ರೈತರ ಪಾಲಿಗೆ ಆಸರೆಯಾಗಿರುವ ಅನೇಕ ಜಾನುವಾರಗಳ ರೋಗಗಳಿಂದ ಮುಕ್ತಿಗೊಳಿಸಿ ಎಂದು ಪಶುವೈದ್ಯರ ನೇಮಕ ಮಾಡಿಸುವಂತೆ ಕೂಡ್ಲಿಗಿ ಶಾಸಕ ಎನ್ ವೈ ಗೋಪಾಲಕೃಷ್ಣ ಅವರಿಗೆ ನಿನ್ನೆ ಮನವಿ ಮಾಡಿದ್ದಾರೆ.