ಇಂಡಿ:ಮೇ.27:ಪ್ರತಿಯೊಬ್ಬರು ಕನಸು ಕಾಣುತ್ತಾರೆ. ಆದರೆ ಕನಸ್ಸನ್ನು ನನಸು ಮಾಡಲು ಶ್ರಮವಹಿಸದೇ ಆಗದು. ಸಾಧನೆಯ ಹಾದಿ ಬಲು ಕಷ್ಟ.ಅದರಲ್ಲೂ ಯುಪಿಎಸ್‍ಸಿ ಪರೀಕ್ಷೆಗಳನ್ನು ಎದುರಿಸುವದು ಸುಲಭದ ಮಾತಲ್ಲ. ಹಳ್ಳಿ ಹುಡಗನ ಸಾಧನೆ ಮತ್ತೊಬ್ಬರಿಗೆ ಸ್ಪೂರ್ತಿಯಾಗಲಿದೆ.
ತಾಲೂಕಿನ ಮಸಳಿ ಗ್ರಾಮದ ಸತೀಶ ಸೋಮಜಾಳ ಯುಪಿಎಸ್‍ಸಿ ಪರೀಕ್ಷೆಯಲ್ಲಿ 588 ನೇ ರ್ಯಾಂಕ ಪಡೆದಿದ್ದು ಮಸಳಿ ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.
ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ಪುಟ್ಟ ಗೂಡಂಗಡಿ ಇರಿಸಿಕೊಂಡು ಜೀವನ ಸಾಗಿಸುತ್ತಿರುವ ಶ್ರೀಶೈಲ ಸೋಮಜಾಳ ಅವರ ಪುತ್ರ ಯುಪಿಎಸ್‍ಸಿ ಯಲ್ಲಿ ಪಾಸಾಗಿದ್ದು ಗ್ರಾಮಸ್ಥರಿಗೆ ಹಿರಿಮೆ ತಂದಿದೆ. ಇನ್ನು ಅವರ ಕುಟುಂಬದಲ್ಲಂತು ಸ್ವರ್ಗಕ್ಕೆ ಮೂರೇ ಗೇಣು ಎಂಬಂತಿದೆ.
ವಿದ್ಯೆ ಯಾರೊಬ್ಬರ ಸ್ವತ್ತಲ್ಲ. ತಾಯಿ ಸರಸ್ವತಿದೇವಿ ಬಡವ ಶ್ರೀಮಂತ ಎಂಬ ಬೇಧವಿಲ್ಲದೆ ಶ್ರಮಿಕರಿಗೆ, ಸಾಧಕರಿಗೆ ಒಲಿಯುತ್ತಾಳೆಂಬುದಕ್ಕೆ ಸತೀಶ ಸಾಕ್ಷಿಯಾಗಿದ್ದಾರೆ.
ಸತೀಶ ಸಾದನೆಗೆ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಿಸಿದೆ. ಎಲ್ಲೆಲ್ಲೂ ಪಟಾಕ್ಷಿಯದೇ ಸದ್ದು, ತಮ್ಮೂರಿನ ಯುವಕ ಉನ್ನತ ಹುದ್ದೆಗೇರುತ್ತಾನೆಂಬ ಹಿರಿಮೆ ಗ್ರಾಮಸ್ಥರದು.
ಗ್ರಾಮಸ್ಥರು ಸತೀಶ ರವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯ ಅಶೋಕ ಮರಡಿ, ನಿಂಗಣ್ಣ ಸಿಂದಗಿ, ಸಂಜು ಸೋಲಾಪುರ, ನಿಂಗಪ್ಪ ತಿಳಗುಳ, ಪಾಲಾಕ್ಷಿ ಸಿಂದಗಿ, ಹಣಮಂತ ಮೇತ್ರಿ, ಭೀಮು ಚಾಳಿಕಾರ, ಶಿವಾನಂದ ಕ್ಷತ್ರಿ, ಬಸವರಾಜ ಪಟ್ಟಣಶೆಟ್ಟಿ, ಸತೀಶ ಕಲ್ಲೂರ, ರವಿ ರಾಯಜಿ, ರಾಜು ಹುಬ್ಬಳ್ಳಿ ಮತ್ತಿತರರು ಅಭಿನಂದಿಸಿದ್ದಾರೆ.