ಹಳ್ಳಿ ಸೊಗಡಿನಲ್ಲಿ ಸ್ವರ್ಣ ಭಾರತಿ ಮಹಿಳೆಯರು

ದಾವಣಗೆರೆ.ಜ.೧೭ : ನಗರದ ಆನಗೋಡು ಪಾರ್ಕ್‌ನಲ್ಲಿ ಸ್ವರ್ಣ ಭಾರತಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ ಸದಸ್ಯೆಯರುಸಂಕ್ರಾಂತಿ ಹಬ್ಬದ ನಿಮಿತ್ತ ಉತ್ತರ ಕನ್ನಡ ಶೈಲಿಯ ಉಡುಗೆ ತೊಟ್ಟು ಅದ್ದೂರಿಯಾಗಿ ಸಂಕ್ರಾಂತಿ ಹಬ್ಬ ಆಚರಿಸಿದರು. ಸಂಸ್ಥೆ ಸಂಸ್ಥಾಪಕಿ ಭಾರತಿ ಕೇಶವಮೂರ್ತಿ ದೇವರ ಪೂಜೆಯೊಂದಿಗೆ ಹಬ್ಬಕ್ಕೆ ಚಾಲನೆ ನೀಡಿದರು. ಸಾಂಪ್ರದಾಯಿಕ ಅಡುಗೆಗಳಾದ ಗೋದಿಪಾಯಸ, ಸಜ್ಜೆ ರೊಟ್ಟಿ, ಮೊಸರು ಬುತ್ತಿ, ಎಳ್ಳು ಬೆಲ್ಲ, ಜೋಳದ ರೊಟ್ಟಿ, ಬದನೆಕಾಯಿ ಎಣ್‌ಗಾಯಿ, ಕಡಲೆ ಗಿಡ, ಹಣ್ಣು,ಕಬ್ಬು, ಹೀಗೆಯೇ ನಾನಾ ವಿಧದ ಅಡುಗೆಯನ್ನು ಸದಸ್ಯೆಯರು ಅವರವರ ಮನೆಯಲ್ಲಿ ತಂದು ನೈವೇದ್ಯ  ಮಾಡಿ ಪೂಜಿಸಿದರು. ಸುಮಾರು 40 ಮಹಿಳಾಮಣಿಗಳು ಹಳ್ಳಿ ಸೊಗಡು ಪ್ರದರ್ಶಿಸಿದರು. ಮಹಿಳೆಯರೆಲ್ಲರೂ ಉತ್ತರ ಕನ್ನಡ ಶೈಲಿಯ ಉಡಗೆತೊಟ್ಟು ಪೋಟೋ ಕ್ಲಿಕಿಸಿಕೊಂಡರು.  ತಯಾರಿಸಿ ತಂದ ಅಡುಗೆಗಳನ್ನು ಎಲ್ಲರೊಂದಿಗೆ ಹಂಚಿಕೊಂಡು ಸವಿದರು.ಇದರ ಮಧ್ಯೆ ಕೋಲಾಟ ಆಡಿ ಬಹುಮಾನ ಪಡೆದು ಸಂಭ್ರಮಿಸಿದರು. ಒಟ್ಟಿನಲ್ಲಿ ಸಂಸ್ಥೆ ಅಧ್ಯಕ್ಷಕಿ ನೇತೃತ್ವದಲ್ಲಿ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯೆನಿಯರ ಸಹಕಾರದಿಂದ ವರ್ಷದ ಮೊದಲ ಹಬ್ಬಕ್ಕೆ ಸ್ವಾಗತ ಕೋರಲಾಯಿತು.