ಹಳ್ಳಿ ಪೋರರಿಗೂಉಚಿತ  ಸ್ಕೇಟಿಂಗ್ ತರಬೇತಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಮೇ,19- ಕೇವಲ ನಗರ ವಾಸಿಗಳ ಮಕ್ಕಳು ಕಲಿಯುತ್ತಿದ್ದ ಸ್ಕೇಟಿಂಗ್ ನ್ನು ನೃತ್ಯ ಕಲಾವಿದ,ಶಿಕ್ಷಕ  ಕಟ್ಟೇ ಬಸವ ರಾಜಯ್ಯ  ಗ್ರಾಮೀಣ ಭಾಗದ ಮಕ್ಕಳಿಗೆ ಬೇಸಿಗೆಯ ಅವಧಿಯಲ್ಲಿ ಉಚಿತವಾಗಿ ಹಳ್ಳಿಯ ಪೋರರಿಗೂ ಕಲಿಸುವ ಪ್ರಯತ್ನ‌ಮಾಡಿದ್ದಾರೆ. 
ಕಂಪ್ಲಿ ತಾಲೂಕಿನ ಸುಗ್ಗೇನಹಳ್ಳಿಯ ಶ್ರೀ ವಿದ್ಯಾಭಾರತಿ ಶಾಲೆಯಲ್ಲಿ 20 ದಿನಗಳ ಕಾಲಾ ಬೇಸಿಗೆ ಶಿಬಿರವನ್ನು ಉಚಿತವಾಗಿ ನಡೆಸಿ.ಮಕ್ಕಳಿಗೆ ರಿಂಗ್ ಡ್ಯಾನ್ಸ್, ಸ್ಕೇಟಿಂಗ್, ಮತ್ತು ಡ್ಯಾನ್ಸ್ ತರಬೇತಿಯನ್ನು ನೀಡಿ ಮಕ್ಕಳ ಮತ್ತು ಪೋಷಕರ ಗಮನ ಸೆಳೆದಿದ್ದಾರೆ.