ಹಳ್ಳಿ ಜನರಿಗೆ ಮೂಢನಂಬಿಕೆಯಿಂದ ಹೊರಬರಲು ಹಾಗೂ ಲಸಿಕೆ ಹಾಕಿಸಿಕೊಳ್ಳಲು ಮನವರಿಕೆ ಮಾಡಿಃ ಜಿಲ್ಲಾಧಿಕಾರಿ ಪಿ.ಸುನಿಲ್‍ಕುಮಾರ್

ವಿಜಯಪುರ, ಜೂ.6-ಹಳ್ಳಿಯ ಜನರಿಗೆ ಮೂಢನಂಬಿಕೆಯಿಂದ ಹೊರಬರಲು ತಿಳಿಸುವ ಜೊತೆಗೆ ಕೋವಿಡ್ ಲಸಿಕೆ ಹಾಕಿಕೊಳ್ಳಲು ಗ್ರಾಮಸ್ಥರಿಗೆ ಮನವರಿಕೆ ಮಾಡಿ ಕೋರೊನಾ ಮುಕ್ತ ಗ್ರಾಮವನ್ನಾಗಿಸುವಂತೆ ಜಿಲ್ಲಾಧಿಕಾರಿ ಪಿ.ಸುನಿಲ್‍ಕುಮಾರ್ ಅವರು ಸಲಹೆ ನೀಡಿದ್ದಾರೆ.
ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಕೋವಿಡ್ 19 ಕುರಿತು ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಗ್ರಾಮಸ್ಥರು ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸುತ್ತಿರುವುದು ಕಂಡುಬರುತ್ತಿದ್ದು, ಹಳ್ಳಿಗಳಲ್ಲಿ ಗ್ರಾಮಸ್ಥರು ಇನ್ನು ಮೂಡ ನಂಬಿಕೆಗಳಿಂದ ಹೊರ ಬಂದಿರುವುದಿಲ್ಲ. ಕಾರಣ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಮತ್ತು ಟಾಸ್ಕಪೆÇೀರ್ಸ ಸಮಿತಿ ಸದಸ್ಯರು ಗ್ರಾಮದ ಜನರಿಗೆ ಲಸಿಕೆ ಹಾಕಿಸಿಕೊಳ್ಳಲು ಮನವೊಲಿಸಬೇಕೆಂದು ತಿಳಿಸಿದರು.
ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ದಿನ ಆರೋಗ್ಯ ಸರಿ ಇಲ್ಲದವರ, ಕೋವಿಡ್ ಲಕ್ಷಣವುಳ್ಳವರ ಮನೆಮನೆ ಸರ್ವೆ ಮಾಡಿ ವರದಿ ನೀಡಬೇಕೆಂದು ತಿಳಿಸಿದರು.
ಆರೋಗ್ಯ ಸರಿ ಇಲ್ಲದಿದ್ದರೂ ಸರಿ ಇದೆ ಎಂದು ತಪ್ಪು ಮಾಹಿತಿ ನೀಡುತ್ತಿರುವ, ಅಂತಹವರನ್ನು ಕೂಡಾ ಆಯಾ ವಾರ್ಡಿನ ಸದಸ್ಯರು, ಹಿರಿಯರು ಅವರಿಗೆ ಆರೋಗ್ಯದ ಬಗ್ಗೆ ಸರಿಯಾಗಿ ಮನವೊಲಿಸಿ, ಸೂಕ್ತ ಚಿಕಿತ್ಸೆ ಬಗ್ಗೆ ತಿಳಿಹೇಳಬೇಕೆಂದು ತಿಳಿಸಿದರು.
ನಂತರ ಸಭೆಯಲ್ಲಿ ಮಾತನಾಡಿದ ವೈದ್ಯಾಧಿಕಾರಿಗಳು ಗ್ರಾಮದಲ್ಲಿ 7 ಜನ ಕೋವಿಡ್ರೋ ರೋಗ ಲಕ್ಷಣವುಳ್ಳವರು ವರಿದಿಯಾಗಿದ್ದು ,ಇದರಲ್ಲಿ 3 ಜನ ಕೋವಿಡ್ ಪಾಜೆಟಿವ್ ರೋಗಿಗಳು ಇದ್ದಾರೆ ಹಾಗೂ ಎಲ್ಲ ರೋಗಿಗಳಿಗೆ ಮೆಡಿಕಲ್ ಕಿಟ್ ನೀಡಲಾಗಿದೆ ಎಂದು ಸಭೆಯಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ನಂತರ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಗೋವಿಂದ ರೆಡ್ಡಿ ಅವರು ಮಾತನಾಡಿ ಗ್ರಾಮಪಂಚಾಯಿತಿ ಅಧ್ಯಕ್ಷರು,ಸದಸ್ಯರು,ಟಾಸ್ಕಪೆÇೀರ್ಸ ಸದಸ್ಯರು ಮತ್ತು ಗ್ರಾಮಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರತಿ ದಿನ ಗ್ರಾಮದಲ್ಲಿ ಸರ್ವೆ ಕಾರ್ಯವನ್ನು ಮುಂದುವರಿಸಬೇಕು, ರೋಗದ ಲಕ್ಷಣ ಉಳ್ಳವರನ್ನು ಗುರುತಿಸಿ, ಅವರಿಗೆ ಸೂಕ್ತವಾದ ಮೆಡಿಕಲ್ ಕಿಟ್ ಮತ್ತು ಆಹಾರ ಕಿಟ್‍ಗಳನ್ನು ನೀಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಶಬನಮ್ ಲಾಲಸಾಬ ಪಾಂಡುಗೋಳ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಮಟ್ಟದ ಟಾಸ್ಕಪೆÇೀರ್ಸ ಸದಸ್ಯರು, ಹಾಗೂ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.