ಹಳ್ಳಿಹಳ್ಳಿ ಸಂಚಾರಿ ರೈತರಿಗೆ ಬ್ಯಾಂಕ್ ಸೌಲಭ್ಯದ ಅರಿವು”


ಸಂಜೆವಾಣಿ ವಾರ್ತೆ
ಸಿರಿಗೇರಿ ಫೆ23. ಗ್ರಾಮದ ಕೃಷಿಪತ್ತಿನ ಸಹಕಾರ ಸಂಘ (ನಿ)ದಿಂದ ಬ್ಯಾಂಕ್‍ನಲ್ಲಿ ಉಳಿತಾಯ ಖಾತೆ ಹೊಂದಿದ್ದ ರೈತ ಸದಸ್ಯರಿಗೆ  ಎಟಿಎಂ ಕಾರ್ಡ್‍ನಿಂದ ಹೊಂದಬಹುದಾದ ಬ್ಯಾಂಕ್ ಸೌಲಭ್ಯಗಳು ಮತ್ತು ಇತರೆ ಮಾಹಿತಿಯನ್ನು ಬ್ಯಾಂಕ್ ಅಧಿಕಾರಿಗಳು ರೈತರಿಗೆ ಮಾಹಿತಿ ನೀಡಿದರು. ಫೆ22 ರಂದು ಸಿರಿಗೇರಿಯ ಸೊಸೈಟಿ ಕಛೆರಿ ಆವರಣದಲ್ಲಿ ಆಗಮಿಸಿದ್ದ, ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನಿಂದ ಹಳ್ಳಿಹಳ್ಳಿ ಸಂಚಾರಿ ಬ್ಯಾಂಕ್‍ನ ಆರ್ಥಿಕ ಸಾಕ್ಷರತಾ ಕಾರ್ಯಕ್ರಮದ ಅಂಗವಾಗಿ, ಬ್ಯಾಂಕಿನ ಹೆಜ್ಜೆ ಗ್ರಾಮೀಣರ ಮನೆ ಬಾಗಿಲ ಕಡೆಗೆ ಎನ್ನುವ ಅಂಶದೊಂದಿಗೆ ಬಿಡಿಸಿಸಿ ಬ್ಯಾಂಕ್ ಅಧಿಕಾರಿಗಳು ಬ್ಯಾಂಕ್‍ನಿಂದ ಸಿಗುವ ಸೌಲಭ್ಯಗಳ ಮಾಹಿತಿ ನೀಡಿ ಕೃಷಿಸಾಲ, ಕೃಷಿಯೇತರ ಸಾಲ ಸೌಲಭ್ಯಗಳ ಕುರಿತು ಮತ್ತು ಸೊಸೈಟಿಯಲ್ಲಿ ಖಾತೆಹೊಂದಿ ಪಡೆದುಕೊಳ್ಳುವ ಎಟಿಎಂ ಕಾರ್ಡ್‍ನಿಂದ ಎಲ್ಲಾ ಬ್ಯಾಂಕುಗಳ ಎಟಿಎಂಗಳಿಂದ ಹಣಬಿಡಿಸುವ, ಕಟ್ಟುವ, ಬಂಗಾರದ ಮೇಲೆ ಸಾಲ ನೀಡುವ ಸೌಲಭ್ಯ, ಅಡಮಾನ ಸಾಲಗಳು ಮತ್ತು ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ, ಉಪಿಐ ವ್ಯವಸ್ಥೆಗಳನ್ನು ಮಾಡಲಾಗಿದ್ದು ರೈತರು, ಸಣ್ಣ ವ್ಯಾಪಾರಸ್ಥರು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು. ಸಂಚಾರಿ ವಾಹನದಲ್ಲಿನ ಬ್ಯಾಂಕ್, ಎಟಿಎಂ ಯಂತ್ರಗಳ ಪರಿಚಯ ಮಾಡಿಕೊಟ್ಟರು. ವಾಹನದ ಹತ್ತಿರ ಜಮಾವಣೆಯಾದ ಕೆಲ ರೈತರಿಗೆ ಎಟಿಎಂನಿಂದ ಹಣ ಬಿಡಿಸುವ ಮಾಹಿತಿ ತೋರಿಸಿಕೊಟ್ಟರು. ಕೃ.ಪ.ಸ.ಸಂಘದ ಮಾಜಿ ಉಪಾಧ್ಯಕ್ಷ ಕೊಳ್ಳಿಪವಾಡಿನಾಯ್ಕ, ಮಾಜಿ ಕಸಾಪ ತಾ.ಅಧ್ಯಕ್ಷ ಎಸ್.ಎಂ.ನಾಗರಾಜಸ್ವಾಮಿ, ಹಾವಿನಹಾಳ್‍ವೆಂಕಟೇಶ್, ವ್ಯವಸ್ಥಾಪಕರಾದ ವಿಠೋಬಬಲ್ಲೂರು, ಕ್ಷೇತ್ರಾಧಿಕಾರಿಗಳಾದ ಯು.ಮಂಜುನಾಥ, ಚಂದ್ರರೆಡ್ಡಿ, ಸಿರಿಗೇರಿ ಸೊಸೈಟಿಯ ಮು.ಕಾ.ನಿರ್ವಾಕಧಿಕಾರಿ ಪೀರ್‍ಸಾಬ್, ಕಂಪ್ಯೂಟರ್ ಅಪರೇಟರ್ ಸುರೇಶ, ಎಚ್.ಗಂಗಾಧರ ಇದ್ದರು.  
ಪೋಟೊ:- ಸಿರಿಗೇರಿಯಲ್ಲಿ ಹಳ್ಳಿಹಳ್ಳಿ ಸಂಚಾರಿ ಬ್ಯಾಂಕ್ ವಾಹನದಲ್ಲಿನ ಬ್ಯಾಂಕ್ ಸೌಲಭ್ಯ ಮಾಹಿತಿ ನೀಡುತ್ತಿರುವುದು.