ಹಳ್ಳಿಗಳಿಗೆ ವಿದ್ಯಾರ್ಥಿ ಯುವಜನರ ಸೈಕಲ್‌ ಜಾಥಾ

ಎಮ್ಮಿಗನೂರಿನ, ಜ.03: ಶ್ರೀ ಪ್ಯಾಟೇ ಬಸವೇಶ್ವರ ತೇರು ಅವರಣದ ಬೀದಿಗಳಲ್ಲಿ ಶನಿವಾರ ರಾತ್ರಿ ಹೋರಾಟ ಗೀತೆಯನ್ನು ಹಾಡಿ, ಕರಪತ್ರಗಳನ್ನು ಹಂಚಲಾಯಿತು.
ಅಲ್ಲಿನ ಗ್ರಾಮಸ್ಥರಿಗೆ ರೈತವಿರೋಧಿ ಕಾಯ್ದೆಗಳ ಬಗ್ಗೆ ಮಾಹಿತಿ ನೀಡಲಾಯಿತು. ಅಲ್ಲಿನ ಜನರೊಂದಿಗೆ ಚರ್ಚೆಗಳು ನಡೆದವು.
ಮತ್ತು ದಾರಿಯುದ್ಧಕ್ಕೂ ಹೊಲಗಳ್ಳಲ್ಲಿ ಕೆಲಸ ಮಾಡುತ್ತಿದ್ದ ರೈತರೊಂದಿಗೆ ಕರಪತ್ರಗಳನ್ನು ಹಂಚಿ ಸರ್ಕಾರ ತರುತ್ತಿರುವ ರೈತ ವಿರೋಧಿ ಕಾನೂನುಗಳ ಬಗ್ಗೆ ಮಾಹಿತಿ ನೀಡಲಾಯಿತು.
ಜಾಥಾದಲ್ಲಿ ದೇಶಪ್ರೇಮಿ ಯುವಾಂದೋಲನದ ಸಂತೋಷ ಎಚ್. ಎಂ, ರಾಜೇಂದ್ರ ರಾಜವಳ, ಗುರುಬಸವ, ಮರಿಸ್ವಾಮಿ, ದುರ್ಗೇಶ್, ಶರಣು, ಭುವನ್ ಕುಮಾರ್, ಇಸ್ಮಾಯಿಲ್ .ಹಾಗೂ ಅಂಬೇಡ್ಕರ್ ಯುವಕಕರ ಸಂಘದ ಯುವಕರು ಇದ್ದರು