
ಚಿಕ್ಕಬಳ್ಳಾಪುರ,ಏ,೧೨: ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗುವ ಮುಂಚೆಯಿಂದಲೇ ಕ್ಷೇತ್ರದ ಪ್ರತಿ ಹಳ್ಳಿಗೂ ಭೇಟಿ ನೀಡುತ್ತಿರುವ ಜೆ.ಡಿ.ಎಸ್. ಅಭ್ಯರ್ಥಿ ಹಾಗೂ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡರು ರಾಜ್ಯದಲ್ಲಿನ ಇತರೆ ಅಭ್ಯರ್ಥಿಗಳಿಗೆ ಮಾದರಿಯಾಗಿದ್ದಾರೆ.
ಮನೆಮನೆಗೆ ಭೇಟಿ ಕಾರ್ಯಕ್ರಮದಡಿ ಮತದಾರರನನ್ನು ಸಂಪರ್ಕಿಸಿ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಅಲಿಸುವ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಯಾವುದೇ ಹಳ್ಳಿಗೆ ಭೇಟಿ ನೀಡಿದರೂ ಗ್ರಾಮಸ್ಥರಿಂದ ವ್ಯಕ್ತ ಬೆಂಬಲ ವ್ಯಕ್ತವಾಗುತ್ತಿದೆ.
ಅಭ್ಯರ್ಥಿ ಬಚ್ಚೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಮುನೇಗೌಡ, ಜಿ.ಪಂ ಮಾಜಿ ಸದಸ್ಯ ರಾಜಕಾಂತ್, ಕೆ.ಆರ್.ರೆಡ್ಡಿ, ಸ್ವರೂಪ್ ರೆಡ್ಡಿ ಸೇರಿದಂತೆ ಅನೇಕ ಮುಖಂಡರು ನಡೆಸುತ್ತಿರುವ ಮನೆಮನೆಗೆ ಭೇಟಿ ಕಾರ್ಯಕ್ರಮ ೬೬ನೇ ದಿನಕ್ಕೆ ಕಾಲಿಟ್ಟಿದೆ. ಕ್ಷೇತ್ರದ ಪ್ರತಿ ಹಳ್ಳಿಗೂ ಭೇಟಿ ನೀಡುತ್ತಿರುವಾಗ ತ್ವರಿತವಾಗಿ ಆಗಬೇಕಾಗಿರುವ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಗಮನಕ್ಕೆ ತರುತ್ತಿದ್ದಾರೆ.
ತಾವೊಬ್ಬ ಮಾಜಿ ಶಾಸಕರೆಂಬ ಹಮ್ಮಿಲ್ಲದೆ ಅತ್ಯಂತ ಸರಳವಾಗಿ ಪ್ರತಿ ದಿನ ಬೆಳಿಗ್ಗೆ ೮ ರಿಂದ ರಾತ್ರಿ ೧೦ರತನಕ ಪಾದಯಾತ್ರೆ ಮೂಲಕ ಮತಯಾಚನೆ ಮಾಡುತ್ತಿರುವ ಇವರು ತಿಂಡಿ ಮತ್ತು ಊಟದ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿಯೇ ಅಥವಾ ಅಶ್ವಥ ಕಟ್ಟೆಗಳ ಸಮೀಪ ತಾವು ತಮ್ಮೊಂದಿಗೆ ಬರುವ ಬೆಂಬಲಿಗರೊಂದಿಗೆ ಊಟ ಮಾಡುವ ಪರಿ ನಿಜಕ್ಕೂ ಗ್ರಾಮೀಣ ಜನತೆಯ ಮನಸ್ಸನ್ನು ಗೆಲ್ಲುವಂತಾಗಿರುವುದು ಕಂಡು ಬಂದಿದೆ.
ಕಳೆದ ಮೂರು ಭಾರಿ ಶಾಸಕರಾಗಿರುವ ಡಾ.ಕೆ.ಸುಧಾಕರ್ ಕಾರ್ಯವೈಖರಿಯಿಂದ ಜನ ಬೇಸತ್ತಿದ್ದಾರೆ. ಈ ಬಗ್ಗೆ ಜನರು ಬಹಿರಂಗವಾಗಿ ಹೇಳಿಕೊಳ್ಳಲಾಗದೆ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆಲ್ಲ ಅಂತ್ಯಕಾಣುವ ಸಮಯ ಸಮೀಪಿಸುತ್ತಿದ್ದು ಜನ ತೀರ್ಮಾನ ಮಾಡಬೇಕು ಎಂದು ಅಭ್ಯರ್ಥಿ ಬಚ್ಚೇಗೌಡ ಎಚ್ಚರಿಸಿದರು.