
ಗುರುಮಠಕಲ್:ಫೆ.24:ಜಯ ಕರ್ನಾಟಕ ಸಂಘಟನೆ ಗುರುಮಠಕಲ್ ತಾಲೂಕ ಘಟಕದ ಪದಾಧಿಕಾರಿಗಳ ಜೊತೆಗೆ ತಹಸೀಲ್ದಾರರ ಮೂಲಕ ಮಾನ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು ಬಳಿಕ ತಾಲೂಕಾಧ್ಯಕ್ಷ ರಾದ ನಾಗೇಶ್ ಗದ್ದಿಗಿ ಮಾತಾಡಿ ಈಗಾಗಲೇ ಬೇಸಿಗೆ ಆರಂಭ ಆಗಿರುವುದರಿಂದ ತಾಲೂಕ ಸೇರಿದಂತೆ ಸುತ್ತಮುತ್ತಲಿನ ಕೆಲ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಕಂಡುಬರುತ್ತಿದ್ದು ಕಾರಣ ಹಳ್ಳಿಗಳಲ್ಲಿ ನೀರಿನ ಸಮಸ್ಯೆಗಳು ಆಗದಂತೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಬೇಸಿಗೆಯಲ್ಲಿ ಉಲ್ಬಣಗೊಳ್ಳುವ ಶುದ್ಧ ಕುಡಿಯುವ ನೀರಿನ ತೊಂದರೆ ಆಗದಂತೆ ಅಧಿಕಾರಿಗಳು ಮುಂಜಾಗ್ರತೆ ವಹಿಸುವುದರ ಜೊತೆಗೆ ತಾಲೂಕಿನ ಯಾವ ಯಾವ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಆಗಬಹುದು ಮತ್ತು ಅದಕ್ಕೆ ಯಾವ ರೀತಿಯ ಪರಿಹಾರವನ್ನು ಕಂಡುಕೊಳ್ಳಬೇಕು ಹಾಗೂ ಮುಂಜಾಗ್ರತೆಗಾಗಿ ತೆಗೆದುಕೊಳ್ಳುವ ಕ್ರಮಗಳ ಕುರಿತು ಅಧಿಕಾರಿಗಳು ತಾಲೂಕಿನ ತಹಸೀಲ್ದಾರರು, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಸಂಬಂಧಿಸಿದ ಇತರೆ ಅಧಿಕಾರಿಗಳು ಸೇರಿ ತಾಲೂಕಿನಲ್ಲಿ ಸಭೆ ನಡೆಸಿ ಆಯಾ ಗ್ರಾಮ ಪಂಚಾಯಿತಿ ಪಿ.ಡಿ. ಓ.ಗಳಿಗೆ ಹಾಗೂ ವಾಟಮ್ರ್ಯನ್ ಗಳಿಗೆ ಸರಿಯಾಗಿ ಕಾರ್ಯನಿರ್ವಹಿಸಲು ಸೂಚಿಸಬೇಕು. ಹಾಗೂ ಗ್ರಾಮಗಳಲ್ಲಿ ನೀರು ಸೋರಿಕೆಯಾಗದಂತೆ ಕಾರ್ಯ ನಿರ್ವಹಿಸಬೇಕು, ಕೆಟ್ಟು ನಿಂತಿರುವ ಅರ್.ಓ ಪ್ಲಾಂಟ್ಗಳನ್ನು ದುರಸ್ತಿಗೊಳಿಸಿ ಜನರಿಗೆ ನೀರಿನ ಸಮಸ್ಯೆ ಅಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಒಂದು ವೇಳೆ ನಿರ್ಲಕ್ಷ್ಯ ವಹಿಸಿದಲ್ಲಿ ನಮ್ಮ ಸಂಘಟನೆಯ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಗೌರವ ಅದ್ಯಕ್ಷರಾದ, ಮಲ್ಲಿಕಾರ್ಜುನ್ ಕಾಕಲವಾರ, ತಾಲೂಕ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಮೇಧಾ, ಉಪಾಧ್ಯಕ್ಷ ಕಾಶಪ್ಪ ಬೋಯಾ, ನಗರ ಘಟಕದ ಅಧ್ಯಕ್ಷ ಎಸ್. ಪಿ.ಮಹೇಶ್ ಗೌಡ, ರಿಯಾಜ್ ಅಹ್ಮದ್,ರವಿ ದರಂಪೂರ್, ಸಾಬು. ಶೀನು, ಪ್ರಕಾಶ್, ಬನ್ನು ಮಡುಗು ಸೇರಿದಂತೆ ಹಲವು ಮುಖಂಡರು ಸಂಘಟನೆಯ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಪಾಲ್ಗೊಂಡಿದ್ದರು.