ನವದೆಹಲಿ, ಮೇ ೨೮- ದೇಶದ ವಿವಿಧ ಹಳ್ಳಿಗಳಲ್ಲಿ ೫೦ ಅಮೃತ ಸರೋವರಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಜಲಸಂಪನ್ಮೂಲಗಳ ಮೂಲಕ ಅನೇಕ ಸ್ಟಾರ್ಟ್‌ಗಳಿಗೆ ಉತ್ತೇಜನ ದೊರೆಕಿದೆ. ಇದರಲ್ಲಿ ಕುಂಬಿ ಕಾಗದ ಸ್ಟಾರ್ಟ್ ಅತ್ಯಂತ ವಿಶೇಷವಾಗಿ ಎಂದು ಅವರು ಬಣ್ಣಿಸಿದ್ದಾರೆ.
ಪ್ರತಿ ತಿಂಗಳ ಕೊನೆಯ ವಾರದಲ್ಲಿ ನಡೆಯುವ ಆಕಾಶವಾಣಿಯ ಮನದ ಮಾತು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇಶದ ವಿವಿಧ ಹಳ್ಳಿಗಳಲ್ಲಿ ಯುವಕರು ಜಲಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಕಾರ್ಯದಲ್ಲಿ ನಿರಂತರಾಗಿದ್ದಾರೆ. ಜಲಸಂರಕ್ಷಣೆಯ ಬಗ್ಗೆ ಯುವ ಸಮುದಾಯ ಮನೆ ಮನೆಗೆ ತೆರಳಿ ನೀರಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಇದಕ್ಕಾಗಿ ಯುವಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ದೇಶದ ವಿವಿಧ ಪ್ರಸಿದ್ಧ ವಸ್ತುಸಂಗ್ರಹಾಲಯದಲ್ಲಿ ಭಾರತ ಇತಿಹಾಸ ಸಂಗ್ರಹಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಸ್ವಾತಂತ್ರ ಹೋರಾಟಗಾರರ ೧೦ ವಸ್ತುಸಂಗ್ರಹಾಲಯಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ಹೇಳಿದರು.ದೇಶದ ಪ್ರತಿಯೊಂದು ವಸ್ತುಸಂಗ್ರಹಾಲಯದ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು. ಯುವಸಮುದಾಯದ ಕರ್ತವ್ಯವಾಗಿದೆ. ಅವಕಾಶ ಲಭ್ಯವಾದಾಗ ವಸ್ತುಸಂಗ್ರಹಾಲಯಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಇಂದು ಸ್ವಾತಂತ್ರ ಸೇನಾನಿ ವೀರ ಸಾವರ್ಕರ್ ಅವರ ಜನ್ಮ ದಿನವಾಗಿದ್ದು ಅವರ ತ್ಯಾಗ, ಸಾಹಸ ಪ್ರತಿಯೊಬ್ಬರಿಗೆ ಪ್ರೇರಣೆಯಾಗಿದೆ. ಸಾಮಾಜಿಕ ನ್ಯಾಯಕ್ಕಾಗಿ ತಮ್ಮದೆ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ವಿದ್ಯಾರ್ಥಿಗಳ ಜೊತೆ ಸಂವಾದ
ಮನದ ಮಾತು ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅರುಣಾಚಲ ಪ್ರದೇಶದ ಗ್ಯಾಮರ್ ನ್ಯೋಕುಮ್ ಮತ್ತು ಬಿಹಾರದ ವಿಶಾಖ ಸಿಂಗ್ ಇಬ್ಬರು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು. ಎರಡು ರಾಜ್ಯಗಳ ನಡುವೆ ಹೊಸ ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶದಿಂದ ಯುವ ಸಂಗಂ ಉಪಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.