ಮಾನ್ವಿ,ಮಾ.೨೩- ಪ್ರತಿ ವರ್ಷದ ಯುಗಾದಿ ಹಬ್ಬದ ಕರಿದಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿನ ಜನರು ಅಸುರ ಶಕ್ತಿಗಳ ನಿರ್ನಾಮದ ಸಂಕೇತವಾಗಿ ಆಚರಿಸುವ ಯುಗಾದಿ ಹಬ್ಬದ ಹೋಳಿಯಾಗಿ ತಾಲೂಕಿನ ಅಮರಾವತಿ, ಜಾನೇಕಲ್, ಗವಿಗಟ್, ಬ್ಯಾಗವಾಟ, ಸಂಗಾಪುರ ಸೇರಿದಂತೆ ಬಹುತೇಕ ತಾಲೂಕಿನ ಎಲ್ಲಾ ಹಳ್ಳಿಗಳಲ್ಲಿ ಈ ಹೊಳಿ ಹಬ್ಬ ಯುವಕರು, ಯುವತಿಯರು, ಚಿಣ್ಣರು ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು.
ಯುಗಾದಿ ಹಬ್ಬದ ಹೋಳಿ ನಿಮಿತ್ಯ ಬೆಳಿಗ್ಗೆಯಿಂದಲೇ ಯುವಕರು ಬಣ್ಣ ತೆಗೆದುಕೊಂಡು ಹಲಿಗೆ ಬಾರಿಸುತ್ತಾ, ಡ್ಯಾನ್ಸ್ ಮಾಡುತ್ತಾ, ಪರಸ್ಪರರು ಬಣ ಎರಚುತ್ತಾ ಹೋಳಿ ಆಚರಿಸುತ್ತಿದ್ದಾರೆ.
ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಯುಗಾದಿ ಹಬ್ಬದ ಹೋಳಿ ದಿನ ಹಳ್ಳಿಯಲ್ಲಿನ ಜನರು ಬಣ್ಣದಲ್ಲಿ ತೇಲಿದರು..