ಹಳ್ಳಿಗಳಲ್ಲಿ ಕೊರೋನಾ ತಡೆಗಟ್ಟಲು ವಿಫಲವಾದ ಜಿಲ್ಲಾಡಳಿತ: ಶಕ್ತಿಕುಮಾರ್ ಉಕಮನಾಳ

ವಿಜಯಪುರ, ಮೇ.28-ಹಳ್ಳಿಗಳಲ್ಲಿ ಕೊರೋನಾ ತಡೆಗಟ್ಟಲು ಜಿಲ್ಲಾಡಳಿತ ಸಂಪೂಣ್ ವಿಫಲವಾಗಿದೆ ಎಂದು ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಶಕ್ತಿಕುಮಾರ್ ಉಕಮನಾಳ ಆರೋಪಿಸಿದ್ದಾರೆ.
ಪ್ರಕಟಣೆಯೊಂದನ್ನು ನೀಡಿರುವ ಅವರು ಹಳ್ಳಿಗಳಲ್ಲಿ ಕೊರೋನಾ ತಡೆಗಟ್ಟಲು ವಿಫಲವಾದ ಜಿಲ್ಲಾಡಳಿತ ನಗರದಲ್ಲಿ ಕೊರೋನಾ ಟೆಸ್ಟಿಂಗ್ ಕಡಿಮೆಯಾಗಿರುವುದರಿಂದ ಕೊರೋನಾ ಪಾಸಿಟಿವ್ ಕಡಿಮೆ ಬರುತ್ತಿವೆ ಜನರಲ್ಲಿ ಭಯ ಹೊರಟುಹೋಗಿದೆ. ಲಾಕ್ಡೌನ್ ಮಾಡುವುದರಿಂದ ಕೊರೋನಾ ತಡೆಗಟ್ಟಲು ಸಾಧ್ಯವಿಲ್ಲ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಜಿಲ್ಲಾಡಳಿತ ಮಾಡಬೇಕಾಗಿದೆ ರಾಜ್ಯ ಸರ್ಕಾರವು ಚುನಾವಣೆಯಲ್ಲಿ ಕೊರೋನಾ ಮರೆತುಹೋಗಿತ್ತು ಆದಕಾರಣ ಜನರನ್ನು ಜ್ಞಾಪಿಸು ಮತ್ತೆ ಕೊರೋನಾ ಜನರ ಜೀವ ತೆಗೆಯುತ್ತ ಬಂದಿತ್ತು ಆದರೆ ರಾಜ್ಯ ಸರ್ಕಾರ ಕೊರೋನಾ ತಡೆಗಟ್ಟುವಲ್ಲಿ ವಿಫಲವಾಗಿದೆ ಎಂದು ಆಪಾದಿಸಿದ್ದಾರೆ.
ಈಗ ಮತ್ತೆ ಮೂರನೆಯ ಅಲೆ ಮಕ್ಕಳನ್ನು ಬಲಿ ತೆಗೆಯುತ್ತೆ ಎಂದು ಮಾಧ್ಯಮಗಳಲ್ಲಿ ಸುದ್ದಿ ತಿಳಿಯುತ್ತದೆ ಆದರೆ ಸರ್ಕಾರ ಮತ್ತೆ ಕೊರೋನಾ ಮರೆತಂತೆ ಕಾಣುತ್ತಿದೆ ಮುಖ್ಯಮಂತ್ರಿಗಳು 30 ಜಿಲ್ಲೆಯ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿ ಇನ್ನೂ ಹೆಚ್ಚಿನ ಕಠಿಣ ಲಾಕ್ಡೌನ್ ಜಾರಿಗೆ ತಂದು ಹಳ್ಳಿಗಳತ್ತ ಪಂಚಾಯಿತಿಯ ಪಿಡಿಓಗಳಿಗೆ ಗ್ರಾಮಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಾಗಿದೆ ಒಂದು ವೇಳೆ ಕೈ ಕಟ್ಟಿ ಕುಳಿತರೆ ಇನ್ನಷ್ಟು ಜೀವ ಸರ್ಕಾರ ಬಲಿ ತೆಗೆಯುವುದು ಗೊತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಆದಕಾರಣ ಜಿಲ್ಲಾಡಳಿತವು ಪ್ರತಿಯೊಂದು ಪಂಚಾಯಿತಿಗೆ ಕೊರೋನಾ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗಿದೆ ಎಲ್ಲರೂ ಒಟ್ಟಾಗಿ ಕೊರೋನಾ ತಡೆಗಟ್ಟಿ ನಮ್ಮ ನಮ್ಮ ಜೀವ ರಕ್ಷಿಸಿಕೊಳ್ಳೋಣ ಪ್ರತಿಯೊಂದು ಹಳ್ಳಿಗಳಲ್ಲಿ ಕೊರೋನಾ ಜಾಗೃತಿ ಮೂಡಿಸಬೇಕೆಂದು ಉಕಮನಾಳ ಜಿಲ್ಲಾಡಳಿತಕ್ಕೆ ವಿನಂತಿ ಮಾಡಿಕೊಂಡಿದ್ದಾರೆ.