ಹುಮನಾಬಾದ್ :ಜೂ.3:ಕ್ಷೇತ್ರದ ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದ್ದರೂ ಕ್ರಮ ವಹಿಸದ ಬಗ್ಗೆ ಸಿಡಿಮಿಡಿಗೊಂಡ ಶಾಸಕ ಡಾ.ಸಿದ್ದ ಪಾಟೀಲ್, ಅಬಕಾರಿ ನಿರೀಕ್ಷಕರನ್ನು ತರಾಟೆಗೆ ತೆಗೆದುಕೊಂಡರು. ಪ್ರತಿ ಗ್ರಾಮದ ನಾಲೈದು ಕಡೆ ಕಿರಾಣಿ ಅಂಗಡಿ, ಹೋಟೆಲ್‍ಗಳಲ್ಲಿ ಅನಧಿಕೃತ ಮದ್ಯ ಮಾರಾಟ ನಡೆಯುತ್ತಿದ್ದರೂ ಏಕೆ ಕ್ರಮ ಕೈಗೊಳ್ಳುತ್ತಿಲ್ಲ? ಇದರಿಂದ ಹಳ್ಳಿಗಳಲ್ಲಿ ಗಲಾಟೆ, ಜಗಳ ನಡೆಯುತ್ತಿವೆ ಎಂದು ಮಹಿಳೆಯರು ನಿತ್ಯ ಶಾಪ ಹಾಕುತ್ತಿದ್ದರೂ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಬಕಾರಿ ಇಲಾಖೆ ನಿರೀಕ್ಷಕ ದೇವಿದಾಸ ಅವರನ್ನು ಎಚ್ಚರಿಕೆ ನೀಡಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿಸಭಾಂಗಣದಲ್ಲಿ ಶಾಸಕರ ನೇತೃತ್ವದಲ್ಲಿಶುಕ್ರವಾರ ನಡೆದ ತಾಲ್ಲೂಕು ಮಟ್ಟದಅಧಿಕಾರಿಗಳ ಸಭೆಯಲ್ಲಿ ಅವರುಮಾತನಾಡಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಗೌತಮ ಮಾತನಾಡಿ, ಕೆಲವೇ ದಿನಗಳಲ್ಲಿ ಮುಂಗಾರು ಬಿತ್ತನೆ ಆರಂಭವಾಗಲಿದೆ. ಬಿತ್ತನೆಗೆ ಪೂರಕವಾಗಿ ಕೃಷಿ ಇಲಾಖೆ ವತಿಯಿಂದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಹುಮನಾಬಾದ್ ತಾಲೂಕು ವ್ಯಾಪ್ತಿಯ ರೈತರ ಸಂಪರ್ಕ ಕೇಂದ್ರದಲ್ಲಿ ಕೆಲವೇ ದಿನಗಳಲ್ಲಿ ಬಿತ್ತನೆ ಬೀಜ ವಿತರಿಸಲಾಗುವುದು
ಎಂದರು
ಹುಮನಾಬಾದ ಪಟ್ಟಣದಲ್ಲಿ ನಡೆದ ಯುಜಿಡಿ ಕಾಮಗಾರಿ, ಪಟ್ಟಣದ ಪುರಸಭೆ ಉದ್ಯಾನದಲ್ಲಿ ನಿರ್ಮಾಣಗೊಂಡ ಭವನ, ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಅನುಷ್ಠಾನಗೊಂಡಿರುವ ಜೆಜೆಎಂ ಯೋಜನೆ ಕುರಿತು ಖುದ್ದು ಪರಿಶೀಲನೆ ನಡೆಸುವುದಾಗಿ ತಿಳಿಸಿದರು. ಪಟ್ಟಣದಲ್ಲಿ ಜನವರಿ ತಿಂಗಳಲ್ಲಿ ವಿದ್ಯುತ್ ದೀಪಗಳು ಅಳವಡಿಸಿದ್ದು, ಇದೀಗ ಹಾಳಾಗಿವೆ. ಯಾವ ಗುತ್ತಿಗೆದಾರರು ಪೂರೈಕೆ ಮಾಡಿದ್ದಾರೆ. ಯಾವ ಕಂಪನಿಯ ದೀಪಗಳು ಅಳವಡಿಸಲಾಗಿದೆ? ಅದರ ವಾರಂಟಿ ಎಷ್ಟು ವರ್ಷ? ಎಂಬುವುದು ಮಾಹಿತಿ ನೀಡಿ.
ಬರೀ ವಿದ್ಯುತ್ ದೀಪಕ್ಕೆ ಹಣ ಖರ್ಚುಮಾಡಿದರೆ ಹೇಗೆ ಎಂದು ಪುರಸಭೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿ
ತಹಸೀಲ್ದಾ ಅಂಜುಮ್ ತಬಸುಮ್, ತಾಪಂ. ಇಒ ದೀಪಿಕಾ ನಾಯ್ಕ್, ಪಶು ಸಂಗೋಪನೆ ಸಹಾಯಕ ನಿರ್ದೇಶಕ ಡಾ. ಗೋವಿಂದ,ತಾಲೂಕ ವೈದ್ಯಾಧಿಕಾರಿ ಡಾ. ಶಿವಕುಮಾರ್ ಸಿದ್ದೇಶ್ವರ, ತಾಪಂ, ಎಡಿ ಶಿವಲೀಲಾ, ಮುಖ್ಯ ವೈದ್ಯಾಧಿಕಾರಿ ಡಾ. ನಾಗನಾಥ ಹುಲಸೂರೆ ಅನೇಕ ಅಧಿಕಾರಿಗಳು ಇದ್ದರು.