ಹಳ್ಳಿಖೇಡ: ವೃತ್ತಿಪರ ಕೋರ್ಸುಗಳ ಪ್ರವೇಶಾತಿಗೆ ತರಬೇತಿ

ಬೀದರ,ಆ.7- ಹಳ್ಳಿಖೇಡ(ಬಿ) ಗ್ರಾಮದಲ್ಲಿರುವ ಬಸವತೀರ್ಥ ವಿದ್ಯಾಪೀಠ ಪದವಿ ಪೂರ್ವ ವಿಜ್ಞಾನ ಕಾಲೇಜು ಹಾಗೂ “ಲೀಡರ್ಸ್ ಆಫ್ ಟುಮಾರೋ” ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಐಐಟಿ, ನೀಟ್, ಜಿಇಇ, ಸಿಇಟಿ ಪ್ರವೇಶ ಪರೀಕ್ಷೆಗಳ ತರಗತಿಗಳ ಶಿಬಿರಕ್ಕೆ ಡಾ.ಹನಮೆಗೌಡ ಪ್ರಾಧ್ಯಾಪಕರು ಚಾಲನೆ ನೀಡಿದರು.
ಅವರು ಮಾತನಾಡಿ ಮಕ್ಕಳಿಗೆ ಮಾತ್ರಭಾಷೆಯಲ್ಲಿ ಈ ತರಬೇತಿ ನೀಡಿದರೆ ಬಹಳ ಉಪಯುಕ್ತತೆ ಆಗುತ್ತದೆ ಎಂದು ತಿಳಿಸಿದರು
ಕÁರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಶ್ರೀ ಕೇಶವರಾವ ತಳಘಟಕರ್ ಕಾರ್ಯಾಧ್ಯಕ್ಷರು ಮಾತನಾಡಿ ಈ ತರಬೇತಿಗೆ ಎಲ್ಲಾ ಪಾಲಕರು ಸಹಕಾರ ನೀಡುವ ಮೂಲಕ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಲು ನಮ್ಮ ಶಿಕ್ಷಕರು ಕಂಕಣಬದ್ಧರಾಗಿದ್ದಾರೆ ಎಂದು ಹೇಳಿದರು.
ಮುಖ್ಯಅತಿಥಿಗಳಾಗಿ ಸಂಸ್ಥೆಯ ಕೋಶಾಧ್ಯಕ್ಷರಾದ ಶ್ರೀ ಬಸವರಾಜ ಪಾಟೀಲ ಕಮಾಲಪೂರ ಅವರು ಮಾತನಾಡಿ ಈ ನಿರ್ಧಾರ ತೆಗೆದುಕೊಂಡಿದ್ದು ಬಹಳ ಒಳ್ಳೆಯ ಕಾರ್ಯವೆಂದು ಬಣ್ಣಿಸಿದರು. ಅತಿಥಿಗಳಾಗಿ ಸ್ಥಳಿಯ ಅಧ್ಯಕ್ಷರಾದ ಶ್ರೀ ಸೋಮಯ್ಯಾ ಹಿರೇಮಠ, ಕಾರ್ಯದರ್ಶಿಗಳಾದ ಶ್ರೀ ರಮೇಶ ಮಹೇಂದ್ರಕರ್, ಶಾಲೆಯ ಆಡಳಿತಾಧಿಕಾರಿಗಳಾದ ಶ್ರೀ ಗುಂಡಯ್ಯಾ ತೀರ್ಥಾ, ವಿಷಯ ಪರಿಣಿತರಾದ ಶ್ರೀ ಸಂಜೀವಕುಮಾರ ದೇಶಪಾಂಡೆ ಬೆಂಗಳೂರು, ಶ್ರೀ ನರಸಪ್ಪಾ ಚೌಡೇಕರ್ ಹಳ್ಳಿಖೇಡ(ಬಿ) ಶಾಲಾ/ಕಾಲೇಜಿನ ಮುಖ್ಯಸ್ಥರಾದ ಶ್ರೀಮತಿ ವಿದ್ಯಾವತಿ ತೀರ್ಥಾ, ಶ್ರೀ ಚಂದ್ರಕಾಂತ ಬಿರಾದಾರ, ಶ್ರೀ ಮಸ್ತಾನ ಪಟೇಲ್, ವಿದ್ಯಾರ್ಥಿಗಳ ಪಾಲಕರು ಹಾಗೂ ಶಾಲಾ/ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗದವರು ಮತ್ತು ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದರು.