ಹಳ್ಳಿಖೇಡ (ಬಿ) ಹಸಿರು ಸ್ವಚ್ಛ ಪುರಸಭೆ ಮಾಡುವುದೆ ನನ್ನ ಗುರಿ

ಹುಮನಾಬಾದ : ಜು.20:ಪರಿಸರ ಅಸಮತೊಲನ ಹೋಗಲಾಡಿಸಲು ಅರಣ್ಯ ಅಭಿವೃಧಿಗೆ ಹೆಚ್ಚಿನ ಅದ್ಯತೆ ನೀಡಬೇಕೆಂದು ಹಳ್ಳಿಖೇಡ (ಬಿ) ಪುರಸಭೆಯ ಅದ್ಯಕ್ಷ ನಾಗರಾಜ ಹಿಬಾರೆ ತಾಲ್ಲೂಕಿನ ಹಳ್ಳಿಖೇಡ (ಬಿ)ಆರ್.ಜಿ. ಹಿಬಾರೆ ಪಬ್ಲಿಕ ಶಾಲೆಯಲ್ಲಿ ಹಮ್ಮಿಕೊಂಡಿದ ಪರಿಸರ ಸಂರಕ್ಷಣೆ ಜನಜಾಗೃತಿ ಹಾಗೂ ವನಮಹೊತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಟ್ಟಣದ ಖಾಲಿ ನಿವೇಶನ ರಸ್ತೆ ಬದಿ ಮರ ಗಿಡ ನೆಟಿ ಪರಿಸರ ಸಂರಕ್ಷಣೆಗೆ ಆಧ್ಯತೆ ನಿಡಲಾಗುವುದೆಂದು ತಿಳಿಸಿದರು. ಪುರಸಭೆ ಹಸಿರು ಸ್ವಚ್ಛ ಪುರಸಭೆ ಮಾಡಲು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದರು. ವನಮಹೊತ್ಸವ ಕಾರ್ಯಕ್ರಮದಿಂದ ಮಕ್ಕಳಲ್ಲಿ ಅರಣ್ಯ ಸಂರಕ್ಷಣೆ ಮರ-ಗಿಡಗಳ ಬಗ್ಗೆ ಪ್ರೀತಿ ಹುಟ್ಟಲು ಸಹಾಯವಾಗುತ್ತದೆ ಎಂದರು. ಮುಖ್ಯ ಅಥಿತಿಗಳಾಗಿ ಆಗಮಿಸಿದ ಪರಿಸರವಾದಿ ಶೈಲೇಂದ್ರ ಕಾವಡಿ ಮಾತನಾಡಿ ಅರಣ್ಯ ನಾಶದಿಂದ ಭೂತಾಪಮಾನ ಹೆಚ್ಚಳವಾಗಿ ಅನೇಕ ಪ್ರಕೃತಿ ವಿಕೊಪಗಳು ಸಂಭವಿಸಲಾರಂಭಿಸಿವೆ. ಅರಣ್ಯ ಸಂರಕ್ಷಣೆ ಮಾಡಿದರ ನಮಗೆÀ ಉಳಿಗಾಲ ವಿದೆ ಎಂದರು. ಈ ಸಂಸ್ಥೆ ಪರಿಸರದ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಿದಕ್ಕೆ ಪರಿಸರ ವಾಹಿನಿ ಬೀದರ ನೀಡುವ ಪರಿಸರೋತ್ಸವ ಪ್ರಶಸ್ತಿ ಸಂಸ್ಥೆಗೆ ನೀಡಲಾಗುವುದೆಂದು ಘೋಷಿಸಿದರು. ಆರ್.ಜಿ. ಹಿಬಾರೆ ಪುಬ್ಲಿಕ ಶಾಲಾ ಆವರಣದಲ್ಲಿ ಹಚ್ಚಿನ ಮರ ಗಿಡಗಳು ಬೆಳೆಸಿ ಹಸಿರು ಪುಬ್ಲಿಕ ಶಾಲೆ ಮಾಡಿದ್ದು ಸಂತಸ ತಂದಿದೆ.ವಿಧ್ಯಾರ್ಥಿಗಳಿಗೆ ಪರಿಸರ ಅಧ್ಯಯನ ಮಾಡಿಸಲು ಅರಣ್ಯಗಳಿಗಳ ವಿಕ್ಷಣೆ ಮಾಡಿಸಲು ಮನವಿ ಮಾಡಿದರು. ಪ್ರಾಚಾರ್ಯ ಧಾನಮ್ಮ ಬೆಟಗೇರಿ ಪ್ರಾಸ್ತಾವಿಕ ಮಾತನಾಡಿದರು. ಸಂಸ್ಥೆಯ ಉಪಾಧ್ಯಕ್ಷ ರುಚಿತಾ ಹಿಬಾರೆ, ಸ್ನೇಹ ಹಿಬಾರೆ, ಆಡಳಿತ ಅಧಿಕಾರಿ ಶಿವಕಾಂತ ಬೆಟಗೇರಿ, ಶಿಲ್ಪಾವತಿ , ವಿನಾಯಕ ಜೋಶಿ, ರಾಜಶೇಖರ ಶೇರಿಕರ, ಸ್ಕೌಟ್ ಗೈಡ ಅಧಿಕಾರಿ ನಾಗರತ್ನಮ್ಮ ಉಪಸ್ಥಿತರಿದ್ದರು