ಹಳ್ಳಿಖೇಡ ಕೆ ಪ್ರೌಢ ಶಾಲೆಯಲ್ಲಿ ಸ್ಮಾರ್ಟ್ ತರಗತಿ ಆರಂಭ

(ಸಂಜೆವಾಣಿ ವಾರ್ತೆ)
ಹುಮನಾಬಾದ:ಸೆ.25:ವಿದ್ಯಾರ್ಥಿಗಳ ಅಧ್ಯಾಯನಕ್ಕೆ ರೈಟ್ ಟು ಲಿವ್ ಸಂಸ್ಥೆಯೂ ತಾಲ್ಲೂಕಿನ 5 ಪ್ರೌಢ ಶಾಲೆಗಳಿಗೆ ಸ್ಮರ್ಟ್ ತರಗತಿ ನಡೆಸಲು ಟಿ.ವಿ ಹಾಗೂ ಬೈಜೀಸ್ ಉಪಕರಣಗಳು ನೀಡಿ ಸಹಾಯ ಮಾಡಿರುವ ಈ ಸಂಸ್ಥೆಯ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಗುಂಡಪ್ಪಾ ಸಿದ್ಧನಗೂಳ್ ತಾಲ್ಲೂಕಿನ ಹಳ್ಳಿಖೇಡ (ಕೆ) ಸರಕಾರಿ ಪ್ರೌಢ ಶಾಲೆಯಲ್ಲಿ ಸ್ಮರ್ಟ್ ತರಗತಿ ಉದ್ಘಾಟಿಸಿ ಮಾತನಾಡಿದರು.
ತಾಲ್ಲೂಕಿನ ಹಳ್ಳಿಖೇಡ (ಬಿ), ಹಳ್ಳಿಖೇಡ (ಕೆ) ಕಲ್ಲೂರ, ಜಲಸಂಗಿ, ಹುಮನಾಬಾದ ಪ್ರೌಢ ಶಾಲೆಯಲ್ಲಿ ಸ್ಮರ್ಟ್ ತರಗತಿ ಆರಂಭಿಸಲು ಈ ಉಪಕರಣಗಳು ನೀಡಿದ್ದು, ಸಂತಸವಾಗಿದೆ ಎಂದರು. ಬೆಂಗಳೂರು ಮೂಲದ ರೈಟ್ ಟೂ ಲಿವ್ ಸಂಸ್ಥೆ ಹಿಂದುಳಿದ ಪ್ರದೇಶದ ಹುಮನಾಬಾದ ತಾಲ್ಲೂಕಿನಲ್ಲಿ ಐದು ಪ್ರೌಢ ಶಾಲೆಗಳಲ್ಲಿ ಸ್ಮಾರ್ಟ್ ತರಗತಿ ಆರಭಿಸಲು ಸಹಾಯ ಮಾಡಿದಕ್ಕೆ ಅಭಿನಂಧನೆ ಸಲ್ಲಿಸಿದರು. ಸಂಸ್ಥೆಯ ವ್ಯವಸ್ಥಾಪಕರಾದ ವೀರೇಶ್ ಸೊಂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಮುಖ್ಯಗುರುಗಳಾದ ಸಂಗಮ್ಮಾ ಬಮ್ಮಣಿ ಮಾತನಾಡಿ, ಈ ಸಂಸ್ಥೆ ನಮ್ಮ ಪ್ರೌಢ ಶಾಲೆಗೆ ಸ್ಮಾರ್ಟ್ ತರಗತಿ ಆರಂಭಿಸಲು ಟಿ.ವಿ ಇತರೆ ಸಾಮಗ್ರಿಗಳು ವಿತರಿಸಿದಕ್ಕೆ ಧನ್ಯವಾದ ತಿಳಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅನೀತಾ ಸ್ವಂತ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಗುರುಲಿಂಗಪ್ಪಾ ಗೌಡ, ಮಾಣಿಕಪ್ಪಾ ಬಕ್ಕನ್, ದತ್ತಾತ್ರೇಯ ಧೂಳೆ, ಜ್ಯೋತಿ ಪಾಟೀಲ, ಆಶ್ವಿನಿ ಯಾದವ, ಕಮಲಾ, ಉಪಸ್ಥಿತರಿದ್ದರು.