ಹಳ್ಳಿಖೇಡ್(ಕೆ) ಲಸಿಕಾ ಕೇಂದ್ರಕ್ಕೆ ಡಿ.ಹೆಚ್.ಓ ರೆಡ್ಡಿ ಭೇಟಿ: ಪರಿಶಿಲನೆ

ಬೀದರ ಮಾ. 28: ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಅವರ ನಿರ್ದೇಶನದಂತೆ ಕೋವಿಡ್ ಲಸಿಕೆ ನೀಡಿಕೆಯ ಗುರಿ ಸಾಧನೆಗಾಗಿ ಪ್ರತಿ ದಿನ ಆಯಾ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿನ ಪ್ರಗತಿ ಬಗ್ಗೆ ಕೂಡ ಮೇಲ್ವಿಚಾರಣೆ ನಡೆಸಲಾಗುತ್ತಿದೆ.

ಡಿ.ಹೆಚ್.ಓ ಡಾ.ವಿ.ಜಿ.ರೆಡ್ಡಿ ನಿನ್ನೆ ತಾವೇ ಖುದ್ದು ಹುಮನಾಬಾದ್ ತಾಲೂಕಿನ ಹಳ್ಳಿಖೇಡ್ ಕೆ ಪ್ರಾಥಮಿಕ ಆರೋಗ್ಯ ಕೇಂದ್ರಲ್ಲಿನ ಕೋವಿಡ್ ಲಸಿಕಾ ನೀಡಿಕೆ ವಿಭಾಗಕ್ಕೆ ಭೇಟಿ ನೀಡಿ ಕೋವಿಡ್ ಲಸಿಕೆ ವಿತರಣೆಯ ಪ್ರಗತಿಯ ಬಗ್ಗೆ ಮಾಹಿತಿ ಪಡೆದರು.

ನಿನ್ನೆ ಹಳ್ಳಿಖೇಡ್ ಕೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಧ್ಯಾಹ್ನದ ವರೆಗೆ 56 ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ. 25 ಜನರಿಂದ ಸ್ವ್ಯಾಬ್ ಸಂಗ್ರಹಿಸಲಾಗಿದೆ ಎಂದು ಅಲ್ಲಿನ ಮುಖ್ಯ ವೈಧ್ಯಾಧಿಕಾರಿ ಅವರು ಡಿ.ಹೆಚ್.ಓ ಅವರಿಗೆ ಮಾಹಿತಿ ನೀಡಿದರು.

ವೈಧ್ಯಾಧಿಕಾರಿಗಳಲ್ಲಿ ಮನವಿ: ಪ್ರತಿ ದಿನ ಆಯಾ ಪಿಎಚ್ಸಿ, ಸಿಎಚ್ಸಿಗಳಿಗೆ ನಿಗದಿಪಡಿಸುವ ಗುರಿ ಸಾಧನೆಗೆ ಒತ್ತು ಕೊಡಬೇಕು ಎಂಬುದು ಜಿಲ್ಲಾಧಿಕಾರಿಗಳ ನಿರ್ದೇಶನವಿದೆ. ಕಡಿಮೆ ಸಾಧನೆ ಮಾಡಿದ ಆರೋಗ್ಯ ಕೇಂದ್ರಗಳಿಗೆ ಈಗಾಗಲೇ ಶೋ ಕಾಸ್ ನೊಟೀಸ್ ಜಾರಿ ಮಾಡಿ ಎಚ್ಚರಿಕೆ ನೀಡಲಾಗಿದೆ. ನೊಟೀಸ್ ಪಡೆಯುವ ಹಂತಕ್ಕೆ ತಲುಪದೇ, ಕಾಳಜಿ ವಹಿಸಿ ಕರ್ತವ್ಯ ನಿರ್ವಹಿಸಿದಲ್ಲಿ ಕೋವಿಡ್ ಲಸಿಕೆ ನೀಡಿಕೆ ಕಾರ್ಯ ಯಶಸ್ವಿಯಾಗಿ, ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಸಾಧ್ಯವಾಗಲಿದೆ ಎಂದು ತಿಳಿಸಿದರು. ಇಲಾಖೆಯ ಇತರೆ ಅಧಿಕಾರಿಗಳು ಹಾಗೂ ಅಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು.