ಹಳ್ಳಿಖೇಡ(ಬಿ): ಕೆಕೆಆರ್‍ಡಿಬಿ ಯೋಜನೆ, ವಿವಿಧ ಕಾಮಗಾರಿಗೆ ಚಾಲನೆ

ಸಂಜೆವಾಣಿ ವಾರ್ತೆ
ಹುಮನಾಬಾದ್: ಮಾ.7:ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿ ಯೋಜನೆ 2023.24 ಸಾಲಿನ ಅನುದಾನದಲ್ಲಿ ತಾಲ್ಲೂಕಿನ ಹಳ್ಳಿಖೇಡ(ಬಿ)ನ ಪಟ್ಟಣದಲ್ಲಿ ಕೈಗೊಳ್ಳಬೇಕಾಗಿದ್ದ ವಿವಿಧ ಕಾಮಗಾರಿಗೆ ಶಾಸಕ ಡಾ.ಸಿದ್ದಲಿಂಗಪ್ಪಾ ಪಾಟೀಲ ಅವರು ಬುಧವಾರ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿ ಯೋಜನೆ ಅನುದಾನದಲ್ಲಿ ಪಟ್ಟಣದ ಚೌಡಮ್ಮಾ ದೇವಸ್ಥಾನದ ಹತ್ತಿರ ಅಂದಾಜು ವೆಚ್ಚ 15 ಲಕ್ಷದಲ್ಲಿ ಕುಡಿಯುವ ನೀರಿನ ಘಟಕ ನಿರ್ಮಾಣ, ಮತ್ತು ಅಗ್ಸಿ ಹನುಮಾನ ಮತ್ತು ಪ್ಯಾಟಿ ಹನುಮಾನ ಹತ್ತಿರ ಅಂದಾಜು ವೆಚ್ಚ 30 ಲಕ್ಷದಲ್ಲಿ ಸೋಲಾರ ಹೈಮಾಸ್ಕ ನಿರ್ಮಾಣ, ಕಚೇರಿ ಹತ್ತಿರ 15 ಲಕ್ಷದಲ್ಲಿ ಸೋಲಾರ ಹೈಮಾಸ್ಕ ನಿರ್ಮಾಣ, ಹಾಗೂ 66 ಲಕ್ಷದ ಅನುದಾನದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹೊಸ ಕೋಣೆಗಳ ನಿರ್ಮಾಣದ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಯುವ ಉದ್ಯಮಿ ಸಂತೋಷ ಪಾಟೀಲ, ಗಿರೀಶ ತುಂಬಾ, ಪುರಸಭೆ ಸದಸ್ಯರಾದ ರವೀಂದ್ರ ಒಲದೊಡ್ಡಿ, ಮುರಳಿ ಪೆÇಸಂಗೆ, ಸುಶೀಲಕುಮಾರ ಮರಪಳ್ಳಿ, ಮುಖಂಡರಾದ ರಾಜು ಪಾಟೀಲ, ಓಂಪ್ರಕಾಶ ಪ್ರಭಾ, ಸಂಜು ಪ್ರಭಾ, ಲಿಂಗಾನಂದ ತಿಬಶೆಟ್ಟಿ, ಪ್ರಕಾಶ ತಿಬಶೆಟ್ಟಿ, ಸಂಜು ಬರಶೆಟ್ಟಿ, ಪ್ರವೀಣ ಪಾಟೀಲ, ಅರುಣಕುಮಾರ ಬಾವುಗಿ, ನೆಹರು ಬಾವುಗಿ, ರಮೇಶ ತಿಬಶೆಟ್ಟಿ, ಸಂತೋಷ ಯಾದವ, ಸುನಿಲ್ ಡಿ.ಎನ್ ಪತ್ರಿ, ಇದ್ದರು.