ಹಳ್ಳಿಖೇಡ(ಬಿ): ಎನ್.ಎಸ್.ಎಸ್.ವಾರ್ಷಿಕ ವಿಶೇಷ ಶಿಬಿರಕ್ಕೆ ಚಾಲನೆ

ಹುಮನಾಬಾದ್:ಜೂ.11: ತಾಲ್ಲೂಕಿನ ಹಳ್ಳಿಖೇಡ(ಬಿ) ಗ್ರಾಮದ ಬಸವತೀರ್ಥ ವಿದ್ಯಾಪೀಠ ಪದವಿ ಮಹಾವಿದ್ಯಾಲಯದಿಂದ ದತ್ತು ಗ್ರಾಮ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಬಸವ ಮಂದಿರಲ್ಲಿ 2022-23ನೇ ಸಾಲಿನ ಎನ್.ಎಸ್.ಎಸ್. ಘಟಕದ ವಾರ್ಷಿಕ ವಿಶೇಷ ಶಿಬಿರಕ್ಕೆ ಚಾಲನೆ ನೀಡಲಾಯಿತು.

ಚಳಕಾಪುರ ಸಿದ್ಧಾರೋಢ ಮಠದ ಪ.ಪೂ.ಪೂರ್ಣಾನಂದ ಸ್ವಾಮಿ ಸಾನಿಧ್ಯ ವಹಿಸಿ ಮಾತನಾಡಿ ತಾಯಿ ಋಣ ತೀರಿಸಲು ಸಾಧ್ಯವಿಲ್ಲ. ಅಲ್ಪಸೇವೆ ಮೂಲಕ ಸೇವೆ ಸಲ್ಲಿಸಬೇಕು. ನಮ್ಮ ದೇಶದಲ್ಲಿ ಐದು ಜನ ತಾಯಂದಿರರು. ಮೊದಲನೆಯದು ಗೋ ಮಾತಾ, ಗಂಗಾ ಮಾತಾ, ಭೂ ಮಾತಾ, ಗೀತಾ ಮಾತಾ ಮತ್ತು ಭಾರತ ಮಾತಾ ಈ ತಾಯಿಯಂದಿರರ ಸೇವೆ ಮಾಡಿ ಜನ್ಮ ಪುನಿತಗೊಳಿಸುವ ಅವಕಾಶ ಎನ್.ಎಸ್.ಎಸ್. ಕಾರ್ಯಕ್ರಮಕ್ಕಿದೆ. ಎಂದು ನುಡಿದರು.

ಕಲಬಿರಗಿ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮದ ಸಂಯೋಜನಾಧಿಕಾರಿ ಎನ್.ಜಿ.ಕಣ್ಣೂರ ಶಿಬಿರ ಉದ್ಘಾಟಿಸಿ ಮಾತನಾಡಿ, ದೇಶ ಸೇವೆಯೇ ಈಶ ಸೇವೆ. ಸಮಾಜ ಸೇವೆಯನ್ನು ಮಾಡಲು ಎನ್.ಎಸ್.ಎಸ್.ನ ಮುಖ್ಯ ಉದ್ದೇಶವೆಂದು ತಿಳಿಸಿದರು.

ಬಸವತೀರ್ಥ ವಿದ್ಯಾಪೀಠದ ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಕೇಶವರಾವ್ ತಳಘಟಕರ ಅಧ್ಯಕ್ಷತೆ ವಹಿಸಿದರು. ಪುರಸಭೆ ಮಾಜಿ ಅಧ್ಯಕ್ಷ ಮಹಾಂತಯ್ಯಾ ತೀರ್ಥಾ, ಸಕ್ಕರೆ ಕಾರಖಾನೆಯ ವ್ಯವಸ್ಥಾಪಕ ನಿರ್ದೇಶಕ ದಿಗಂಬರ ಸ್ವಾಮಿ, ರಾಜು ಪಾಟೀಲ, ಸ್ಥಳಿಯ ಸಮಿತಿ ಅಧ್ಯಕ್ಷ ಸೋಮಯ್ಯಾ ಹಿರೇಮಠ, ಪರಿಸರ ವಾಹಿನಿ ಅಧ್ಯಕ್ಷ ಶೈಲೇಂದ್ರ ಕವಾಡೆ, ಬಿಟಿವಿಪಿ ಅಡಳಿತಾಧಿಕಾರಿ ಗುಂಡಯ್ಯಾ ತೀರ್ಥ, ಮುಖ್ಯಗುರು ಚಂದ್ರಕಾಂತ ಬಿರಾದಾರ, ಪ್ರಮುಖರಾದ ಮಲ್ಲಿಕಾರ್ಜುನ ಭಂಡಾರಿ, ಶಾಂತಕುಮಾರ, ಸಂಜುಕುಮಾರ ದಾಡಗೆ, ಧುಳಯ್ಯಾಸ್ವಾಮಿ, ಇದ್ದರು. ಪ್ರಾಂಶುಪಾಲ ಮಸ್ತಾನ ಪಟೇಲ್ ಸ್ವಾಗತಿಸಿದರು. ಕುಮಾರಿ ಭಾಗಿರಥಿ ನಿರೂಪಿಸಿದರು. ಬಸವರಾಜ ಝರಕುಂಟೆ ವಂದಿಸಿದರು.