ಹಳ್ಳದಲ್ಲಿ ಹರಿದು ಹೋದ ತಹಸೀಲ್ದಾರ

ಕಲಬುರಗಿ,ಸೆ.16:ಗಣಾಪೂರ ಗ್ರಾಮದ ಹತ್ತಿರದ ಹಳ್ಳ ದಾಟುವಾಗ ನೀರಿನ ರಭಸಕ್ಕೆ ಚಿಂಚೋಳಿಯ ಹಿಂದಿನ ತಹಸೀಲ್ದಾರ ಪಂಡಿತ ಬಿರಾದಾರ್ ರವರ ಕಾರು ಹಳ್ಳದಲ್ಲಿ ಹರಿದು ಹೋಗಿದೆ. ಅವರು ಮರವೇರಿ ಕುಳಿತ್ತಿದ್ದಾರೆ.
ಅವರನ್ನು ರಕ್ಷಿಸುವ ಕಾರ್ಯ ಮುಂದುವರಿದಿದ್ದು, ತಹಸೀಲ್ದಾರರು, ಪೋಲಿಸ್ ಅಧಿಕಾರಿಗಳು, ಅಗ್ನಿಶಾಮಕ ಸಿಬ್ಬಂದ್ದಿ ಸ್ಥಳದಲ್ಲೇ ಠಿಕಾಣಿ ಹೂಡಿ, ಅವರನ್ನು ರಕ್ಷಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.