
ಕಾಳಗಿ,ಮಾ 15 : ಪಟ್ಟಣದ ನೀಲಕಂಠ ಕಾಳೇಶ್ವರ ದೇವಸ್ಥಾನದ ಹತ್ತಿರ ಇರುವ ಹಳ್ಳದಲ್ಲಿ ಸ್ನಾನ ಮಾಡಲು ತೆರಳಿದ್ದ ಅಪರಿಚಿತ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.
ಸುಮಾರು 35-40 ವಯೋಮಾನದ ಈ ಯುವಕನ ಬಗ್ಗೆ ಹೆಚ್ಚಿನ ಮಾಹಿತಿ ಗೊತ್ತಾಗಿಲ್ಲ.ಬಹುಶಃ ದೇವಸ್ಥಾನದ ದರ್ಶನಕ್ಕೆ ಬಂದ ಯಾತ್ರಾರ್ಥಿ ಇರಬಹುದು ಎನ್ನಲಾಗಿದೆ.
ಹಳ್ಳದಲ್ಲಿ ಸುಮಾರು 10 ರಿಂದ 15 ಅಡಿ ಆಳ ನೀರು ಇದ್ದು, ಕೆಸರು ಹೂಳಿನಲ್ಲಿ ಸಿಲುಕಿಕೊಂಡು ಮೇಲಕ್ಕೆ ಬರಲಾರದೆ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಕಾಳಗಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಕಾಳಗಿ ಪಿಎಸ್‍ಐ ವಿಶ್ವನಾಥ ಬಕಾಳೆ ಮತ್ತು ಪೆÇಲೀಸ್ ಸಿಬ್ಬಂದಿಗಳಾದ ಮಹೇಶ ರೆಡ್ಡಿ, ಮಾರುತಿ, ಮಂಜುನಾಥ, ಬಸಪ್ಪ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.