ಹಳ್ಳದಲ್ಲಿ ಕೊಚ್ಚಿ ಹೋದ ಯುವಕ: ಬೆಳಿಗ್ಗೆ ಶವ ಪತ್ತೆ

ಕಲಬುರಗಿ ಜು 23: ತಾಲೂಕಿನ ಕಡಣಿ ಗ್ರಾಮದಲ್ಲಿ ರಾತ್ರಿ ಟ್ರ್ಯಾಕ್ಟರ್ ನಲ್ಲಿ ಹಳ್ಳ ದಾಟುತ್ತಿದ್ದಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದ ಯುವಕನ ಶವ ಇಂದು ಬೆಳಿಗ್ಗೆ ಪತ್ತೆಯಾಗಿದೆ.
ಕಡಣಿ ಗ್ರಾಮದ ಸಿದ್ದಪ್ಪ ಕೆರಂಬಗಿ ( 38) ಮೃತಪಟ್ಟ ಯುವಕ. ದುರ್ಘಟನೆ ಸಂಭವಿಸಿದ ಒಂದು ಕಿಲೋ ಮೀಟರನಷ್ಟು ದೂರ ಮುಳ್ಳು ಕಂಟಿಯಲ್ಲಿ ಸಿಲುಕಿದ ದೇಹ ಪತ್ತೆಯಾಗಿದೆ.ಟ್ರ್ಯಾಕ್ಟರ ಚಾಲಕ ಉಮೇಶ ಮಲ್ಕಾಜಪ್ಪ ( 35) ಮುಳ್ಳು ಕಂಟಿ ಹಿಡಿದು ಪಾರಾಗಿದ್ದಾನೆ.
ಕಲಬುರಗಿ ಸುತ್ತಮುತ್ತ ರಾತ್ರಿ ಭಾರಿ ಮಳೆಯಾದ ಪರಿಣಾಮ ಹಳ್ಳಕೊಳ್ಳಗಳು ಉಕ್ಕಿ ಹರಿದಿವೆ. ಇಬ್ಬರು ಸೇರಿ ಟ್ರ್ಯಾಕ್ಟರ್‍ನಲ್ಲಿ ಕುಳಿತು ಹಳ್ಳ ದಾಟುತ್ತಿದ್ದಾಗ ನೀರಿನ ರಭಸಕ್ಕೆ ಹಳ್ಳದಲ್ಲಿ ಟ್ರ್ಯಾಕ್ಟರ್ ಕೊಚ್ಚಿಹೋಗಿದೆ.
ಹಳ್ಳದಲ್ಲಿ ಶೋಧ:
ನೀರಲ್ಲಿ ಕೊಚ್ಚಿಹೋದ ಯುವಕನಿಗಾಗಿ ರಾತ್ರಿಯಿಡೀ ಶೋಧ ನಡೆಸಲಾಯಿತು. ಪೊಲೀಸರು,ಅಗ್ನಿಶಾಮಕ ದಳದವರು ಪತ್ತೆ ಕಾರ್ಯದಲ್ಲಿ ಭಾಗಿಯಾದರು.ಸಂಚಾರಿ-1 ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.