ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಯುವಕ ಶವ ಪತ್ತೆ

ಕಲಬುರಗಿ ಜು ೨೩: ತಾಲೂಕಿನ ಕಡಣಿ ಗ್ರಾಮದಲ್ಲಿ ರಾತ್ರಿ ಟ್ರ್ಯಾಕ್ಟರ್ ನಲ್ಲಿ ಹಳ್ಳ ದಾಟುತ್ತಿದ್ದಾಗ ನೀರಿನಲ್ಲಿ ಕೊಚ್ಚಿ ಹೋಗಿದ್ದ ಯುವಕನ ಶವ ಇಂದು ಬೆಳಿಗ್ಗೆ ಪತ್ತೆಯಾಗಿದೆ.
ಕಡಣಿ ಗ್ರಾಮದ ಸಿದ್ದಪ್ಪ ಕೆರಂಬಗಿ ಮೃತಪಟ್ಟ ಯುವಕ. ದುರ್ಘಟನೆ ಸಂಭವಿಸಿದ ಒಂದು ಕಿಲೋ ಮೀಟರನಷ್ಟು ದೂರ ಮುಳ್ಳು ಕಂಟಿಯಲ್ಲಿ ಸಿಲುಕಿದ ದೇಹ ಪತ್ತೆಯಾಗಿದೆ.
ಕಲಬುರಗಿ ಸುತ್ತಮುತ್ತ ರಾತ್ರಿ ಭಾರಿ ಮಳೆಯಾದ ಪರಿಣಾಮ ಹಳ್ಳಕೊಳ್ಳಗಳು ಉಕ್ಕಿ ಹರಿದಿವೆ. ಕಡಣಿ ಗ್ರಾಮದ ಇಬ್ಬರು ವ್ಯಕ್ತಿಗಳು ಟ್ರ್ಯಾಕ್ಟರ್‌ನಲ್ಲಿ ಕುಳಿತು ಹಳ್ಳ ದಾಟುತ್ತಿದ್ದಾಗ ನೀರಿನ ರಭಸಕ್ಕೆ ಹಳ್ಳದಲ್ಲಿ ಟ್ರ್ಯಾಕ್ಟರ್ ಕೊಚ್ಚಿಹೋಗಿದೆ.ಟ್ರ್ಯಾಕ್ಟರನಲ್ಲಿದ್ದ ಇಬ್ಬರ ಪೈಕಿ ಚಾಲಕ ಮುಳ್ಳು ಕಂಟಿ ಹಿಡಿದು ಪಾರಾಗಿದ್ದಾನೆ. ನೀರಲ್ಲಿ ಕೊಚ್ಚಿಹೋದ ಯುವಕನಿಗಾಗಿ ರಾತ್ರಿಯಿಡೀ ಶೋಧ ನಡೆಸಲಾಯಿತು.