ಹಳ್ಳಕ್ಕೆ ಮೇಲ್‍ಸೇತುವೆ ನಿರ್ಮಾಣಕ್ಕೆ ಆಗ್ರಹ

(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಜು9: ಲಕ್ಷ್ಮೇಶ್ವರದಿಂದ ಯಲ್ಲಾಪುರ ವಾಯಾ ದೊಡ್ಡೂರು ಮಾರ್ಗವಾಗಿ ಕೇವಲ ಮೂರು ವರ್ಷಗಳ ಹಿಂದೆ ಹದಿಮೂರು ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿದ ರಸ್ತೆಯ ಸ್ಥಿತಿ ಒಂದು ಕಥೆಯಾದರೆ ದೊಡ್ಡೋರು ಸಮೀಪದ ಸೇತುವೆ ಕಥೆಯೇ ಬೇರೆಯಾಗಿದೆ.
ಕೋಟಿ ಕೋಟಿ ಹಣ ಖರ್ಚು ಮಾಡಿ ರಸ್ತೆ ನಿರ್ಮಿಸಿದರು ದೊಡ್ಡೂರು ಸಮೀಪದಲ್ಲಿರುವ ಪೈಪ್ ಅಳವಡಿಸಿರುವ ಹಳ್ಳಕ್ಕೆ 40 ವರ್ಷಗಳ ಹಿಂದೆಯೇ ಪರ್ಷಿಕಲ್ಲು ಜೋಡಿಸಲಾಗಿದೆ ಪರ್ಷಿಕಲ್ಲಿನ ಕೆಳಭಾಗದಲ್ಲಿ ಪೈಪ್ ಅಳವಡಿಸಲಾಗಿದ್ದರು ಹೂಳು ತುಂಬಿ ಮಳೆಗಾಲದಲ್ಲಿ ನೀರು ಪರಸಿಯ ಮೇಲೆ ಹರಿದು ಹಳ್ಳದ ರಭಸದ ನೀರು ಕಡಿಮೆಯಾಗುವವರೆಗೂ ಈ ರಸ್ತೆ ಮಳೆಗಾಲದಲ್ಲಿ ಸಂಪರ್ಕವನ್ನು ಕಳೆದುಕೊಳ್ಳುತ್ತದೆ.
ಹರಿವ ನೀರಿನಲ್ಲಿ ಬಸ್ ಒಂದು ಕೊಚ್ಚಿ ಹೋಗಿ ಅವಘಡ ಸಂಭವಿಸಿದೆ ಅದಾದ್ಮೇಲೆ ಮೋಟರ್ ಸೈಕಲ್ ಸವಾರ ಒಬ್ಬರು ಕೊಚ್ಚಿಕೊಂಡು ಹೋಗಿ ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿದ್ದಾರೆ ಇಷ್ಟೆಲ್ಲಾ ಘಟನೆಗಳು ಜರುಗಿದರು ಲೋಕೋಪಯೋಗಿ ಇಲಾಖೆಯವರು ಈ ಹಳ್ಳಕ್ಕೆ ಎತ್ತರದ ಸೇತುವೆ ನಿರ್ಮಿಸಬೇಕೆಂಬ ಪರಿಕಲ್ಪನೆಗೆ ಒತ್ತು ನೀಡದಿರುವುದಕ್ಕೆ ದೊಡ್ಡವರು ಸೇರಿದಂತೆ ಸೂರಣಗಿ ಬಾಲೆಹೊಸೂರು ಗ್ರಾಮಗಳ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆಗಾಗಿ ಕೋಟಿ ಕೋಟಿ ಹಣ ವಿನಿಯೋಗಿಸುವ ಲೋಕೋಪಯೋಗಿ ಇಲಾಖೆಯವರು 40 ವರ್ಷಗಳ ಹಿಂದೆ ಎಚ್ ಡಿ ದೇವೇಗೌಡರು ಲೋಕೋಪಯೋಗಿ ಸಚಿವರಾಗಿದ್ದಾಗ ನಿರ್ಮಿಸಿದ ಈ ಈ ಪರಸಿಗೆ ಮುಕ್ತಿ ನೀಡಲು ಮುಂದಾಗದಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಕುರಿತು ದೊಡ್ಡೋರು ಗ್ರಾಮ ಪಂಚಾಯತಿಯ ಸದಸ್ಯರಾದ ನಾನಪಾ ಲಮಾಣಿ ಅವರು ಪ್ರತಿಕ್ರಿಯೆ ನೀಡಿ ಸರ್ಕಾರ ಕೂಡಲೇ ಈ ಹಳ್ಳಕ್ಕೆ ಮೇಲ್ ಸೇತುವೆ ನಿರ್ಮಿಸಬೇಕು ಎಂದು ಒತ್ತಾಯಿಸಿದ್ದಾರೆ.