ಹಳ್ಳಕ್ಕೆ ಮಗುಚಿದ ಟಿಟಿ ವಾಹನ: ಮೂವರು ಸಾವು, 11 ಮಂದಿಗೆ ಗಾಯ

ಚಾಮರಾಜನಗರ: ಜ.08: ರಾಷ್ಟ್ರೀಯ ಹೆದ್ದಾರಿ 209 ರ ಗುಡಿಬೋರೆ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಹಳ್ಳಕ್ಕೆ ಟೆಂಪೆÇೀ ಟ್ರಾವೆಲರ್ ಮಗುಚಿ ಮೂವರು ಸಾವಿಗೀಡಾಗಿರುವ ಘಟನೆ ತಾಲೂಕಿನ ಸುವರ್ಣಾವತಿ ಜಲಾಶಯದ ಸಮೀಪ ಶುಕ್ರವಾರ ಬೆಳಗಿನ ಜಾವ 4.30 ರ ಸುಮಾರಿಗೆ ನಡೆದಿದೆ.
ಈ ಟಿಟಿ ವಾಹನ (TN 57 BD 4721) ತಮಿಳುನಾಡಿನ ತಿರುಪೂರ್‍ನಿಂದ ಮೈಸೂರಿಗೆ ಚಾಮುಂಡೆಶ್ವರಿ ದರ್ಶನಕ್ಕೆ ಒಟ್ಟು 15 ಮಂದಿ ಈ ನತದೃಷ್ಟ ಟಿಟಿಯಲ್ಲಿ ಹೋಗುತ್ತಿದ್ದರು. ಮುಂದೆ ಸಾಗುತ್ತಿದ್ದ ಲಾರಿಯನ್ನು ಹಿಂದೆ ಹಾಕಲು ಟಿಟಿ ಚಾಲಕ ಮುಂದಾದಾಗ ಈ ಘಟನೆ ಸಂಭವಿಸಿತು. ಈ ಘಟನೆಯಲ್ಲಿ 11 ಮಂದಿ ಗಾಯಗೊಂಡಿದ್ದಾರೆ.


ಮೃತ ಪಟ್ಟವರನ್ನು ತಮಿಳುನಾಡಿನ ತಿರುಪೂರಿನ ಕನಕಪಾಳ್ಯಂ, ಕಸ್ತೂರುಬಾಯಿ ನಗರದ ಸುಬ್ರಹ್ಮಣ್ಯ (75), ಅಮರಾವತಿ (65) ಎಂದು ಗುರುತಿಸಲಾಗಿದ್ದು, ಇನ್ನೋರ್ವನ ಹೆಸರು ತಿಳಿದುಬಂದಿಲ್ಲ. ಗಾಯಾಳುಗಳನ್ನು ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.