ಹಳ್ಳಕ್ಕೆ ಮಗುಚಿದ ಟಿಟಿ ವಾಹನ: ಮೂವರು ಸಾವು, 11 ಮಂದಿಗೆ ಗಾಯ

ಚಾಮರಾಜನಗರ: ರಸ್ತೆ ಬದಿ ಹಳ್ಳಕ್ಕೆ ಟೆಂಪೋ ಟ್ರಾವೆಲರ್ ಮಗುಚಿ ಮೂವರು ಸಾವಿಗೀಡಾಗಿರುವ ಘಟನೆ ತಾಲೂಕಿನ ಸುವರ್ಣಾವತಿ ಜಲಾಶಯದ ಸಮೀಪ ಶುಕ್ರವಾರ ಬೆಳಗಿನ ಜಾವ 4.30 ರ ಸುಮಾರಿಗೆ ನಡೆದಿದೆ.

ಈ ಟಿಟಿ ವಾಹನ ತಮಿಳುನಾಡಿನ ತಿರುಪೂರ್‌ನಿಂದ ಮೈಸೂರಿಗೆ ಹೋಗುತ್ತಿತ್ತು. ಘಟನೆಯಲ್ಲಿ 11 ಮಂದಿ ಗಾಯಗೊಂಡಿದ್ದಾರೆ.
ಮೃತಪಟ್ಟವರನ್ನು ತಮಿಳುನಾಡಿನ ತಿರುಪೂರಿನ ಕನಕಪಾಳ್ಯಂ, ಕಸ್ತೂರುಬಾಯಿ ನಗರದ ಸುಬ್ರಹ್ಮಣ್ಯ (75), ಅಮರಾವತಿ (65) ಎಂದು ಗುರುತಿಸಲಾಗಿದ್ದು, ಇನ್ನೋರ್ವನ ಹೆಸರು ತಿಳಿದುಬಂದಿಲ್ಲ.

ರಾಷ್ಟ್ರೀಯ ಹೆದ್ದಾರಿ 209 ರ ಗುಡಿಬೋರೆ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ, ರಸ್ತೆಯ ಪಕ್ಕ ಹಳ್ಳಕ್ಕೆ ಟಿಟಿ ಮಗುಚಿದೆ. ಇದರಿಂದಾಗಿ ಸ್ಥಳದಲ್ಲೇ ಮೂರು ಮಂದಿ ಮೃತರಾಗಿದ್ದಾರೆ.
ಈ ಟಿಟಿ ವಾಹನ ತಮಿಳುನಾಡಿನ ತಿರುಪೂರ್‌ನಿಂದ ಮೈಸೂರಿಗೆ ಹೋಗುತ್ತಿತ್ತು. ಘಟನೆಯಲ್ಲಿ 11 ಮಂದಿ ಗಾಯಗೊಂಡಿದ್ದಾರೆ