ಹಳೇ ಹಬೋಹಳ್ಳಿ ಶಾಲೆಯಲ್ಲಿ
ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ, ಗುರು ವಂದನೆ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ನ.14- ಪಟ್ಟಣದ ಹಳೆ ಊರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 1986 ರಿಂದ 1993 ಸಾಲಿನ 1 ರಿಂದ 7ನೇ ತರಗತಿ ಓದಿದ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ಗುರುವಂದನೆ ಕಾರ್ಯಕ್ರಮ ಭಾನುವಾರ ಶಾಲೆಯ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಹಳೆಯ ವಿದ್ಯಾರ್ಥಿ ಕೆಎಂ ಪ್ರಶಾಂತ್  ಮಾತನಾಡಿ ಗುರುಗಳು ಕಲಿಸಿದ ನಮಗೆ ವಿದ್ಯೆಯಿಂದ ನಾವೆಲ್ಲ ಒಂದು ಮಟ್ಟದಲ್ಲಿ ದುಡಿಮೆಯನ್ನು ಕಂಡುಕೊಂಡಿದ್ದೇವೆ ಅವರಿಗೆ ಕೃತಜ್ಞತೆ ಸಲ್ಲಿಸಲು ನಾವೆಲ್ಲರೂ ಸೇರಿ ಈ ಒಂದು ಸ್ನೇಹ ಸಮ್ಮಿಲನ ಹಾಗೂ ಗುರು ವಂದನೆ ಕಾರ್ಯಕ್ರಮ ನನಗೆ ಬಹಳ ಸಂತೋಷ ವಾಗಿದೆ. ಆಲಸ್ಯ ಇದ್ದವನಿಗೆ ವಿದ್ಯೆ ಬರುವುದಿಲ್ಲ ವಿದ್ಯೆ ಇಲ್ಲದಿದ್ದರೆ ದುಡಿಮೆ ಸಿಗುವುದಿಲ್ಲ ದುಡಿಮೆ ಸಂಪತ್ತು ಸಿಗುವುದಿಲ್ಲವೋ ಅವನಿಗೆ ಮಿತ್ರರು ಸಿಗುವುದಿಲ್ಲ ಜೀವನದಲ್ಲಿ ಏನಾದರೂ ಸಿಕ್ಕರೆ ಅದು ಸ್ನೇಹ ಸಂಪತ್ತು ಎಂದರೂ ತಪ್ಪಲ್ಲ ನಮಗೆ ವಿದ್ಯೆ ಕಲಿಸಿದ ಗುರುಗಳು ಬಂದಿದ್ದಾರೆ ಅವರ ಕಲಿಸಿದ ವಿದ್ಯೆ ಎಷ್ಟರಮಟ್ಟಿಗೆ ಗುಣಾತ್ಮಕವಾಗಿದೆ ಎಂಬುದು ಕಾಣಬಹುದು ಎಂದರು.
 ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹಾಲುಸ್ವಾಮಿ ಮಠದ ಹಾಲು ಸಿದ್ದೇಶ್ವರ ಸ್ವಾಮೀಜಿ ನಂದಿಪುರದ ಸ್ವಾಮೀಜಿ ವಹಿಸಿದ್ದರು.
 ಕಾರ್ಯಕ್ರಮದಲ್ಲಿ ಸೇರಿದ ಹಲವಾರು ಸ್ನೇಹಿತರು ಕುಶಲೋಪಚಾರ ಹಾಗೂ ತಮ್ಮ ಬಾಲ್ಯ ಜೀವನದ ಬಗ್ಗೆ ಹಂಚಿಕೊಳ್ಳುತ್ತಿರುವುದು ಕಂಡುಬಂತು.
 ಈ ವೇಳೆ ತಮ್ಮ ಗುರುಗಳಾದ ಕೆವಿಎಂ ಸುಭಾಷ್ ಚಂದ್ರು ಉಮಾಪತಿ ನಾಗರಾಜ್, ವಿ. ಎಸ್.ಮಲ್ಲಿಕಾರ್ಜುನ್, ಗೋರ್ಯ  ನಾಯ್ಕ್   ಕೊಟ್ರಗೌಡ ಜಯಶೀಲಿನ ಗೌಡ ಚಿದಾನಂದಪ್ಪ ಶಂಭುಲಿಂಗಪ್ಪ ಚಂದ್ರಶೇಖರ್ ರಾವ್, ಶಂಸುದ್ದೀನ್ ಸುನಂದ, ಕನಕ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು.
 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯು ಎಸ್ ಕೊಟ್ರೇಶ್ ಪ್ರಭಾರಿ ಮುಖ್ಯ ಗುರುಗಳು ಹಿರಿಯ ಪ್ರಾಥಮಿಕ ಶಾಲೆ ವಹಿಸಿದ್ದರು.
 ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ವೀರೇಶ್ ಮಜ್ಜಿಗಿ, ಆರೋಗ್ಯ ಇಲಾಖೆಯ ಶ್ರೀನಿವಾಸ್ ರೆಡ್ಡಿ, ರಾಘವೇಂದ್ರ, ಹಳೆ ವಿದ್ಯಾರ್ಥಿಗಳಾದ ಕನಕಪ್ಪ ದೊಡ್ಡಬಸಪ್ಪ, ಶಿವಕುಮಾರ್ ಕಿರಣ್ ಕುಮಾರ್ ಪೊಲೀಸ್, ಸಿದ್ದೇಶ್ ಮಂಜುನಾಥ ಕಮ್ಮಾರ್, ಬಿ ಎಂ ಸಂತೋಷ್, ಕಾಟವ್ ಸಂತೋಷ್ ಶೇಷಾವಲಿ, ಎಂಡಿ ಕುಬೇರ್  ಜೈನಾ ಬಿ ನಾಗವೇಣಿ ಗಾಯತ್ರಿ ನಾಗರತ್ನ ಗೌರಮ್ಮ ಅಕ್ಕಮ್ಮ  ಇತರರಿದ್ದರು