ಹಳೇ ವಿದ್ಯಾರ್ಥಿ ಬಳಗದಿಂದ ವೃದ್ದರು, ರೋಗಿಗಳಿಗೆ ಹಣ್ಣು ಬ್ರೆಡ್ ವಿತರಣೆ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಜ. 16 :- ಪಟ್ಟಣದ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನ 2001-02 ನೇ ಸಾಲಿನ ವಿದ್ಯಾರ್ಥಿಗಳು ಸೇರಿ ಗುರುವಂದನಾ ಕಾರ್ಯಕ್ರಮ ನಡೆಸಿದ ಸವಿನೆನಪಿಗಾಗಿ ಮೂರನೇ ವರ್ಷದ ದಿನವಾದ ಭಾನುವಾರದಂದು ಪಟ್ಟಣದ ವೃದ್ದಾಶ್ರಮದ ವೃದ್ಧರಿಗೆ ಹಣ್ಣು, ಬ್ರೆಡ್ , ಬೆಡ್ ಶೀಟ್  ಹಾಗೂ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಬ್ರೆಡ್ ವಿತರಿಸಿದರು.
ಈ   ಸಂದರ್ಭದಲ್ಲಿ  ಆಸ್ಪತ್ರೆ ವೈದ್ಯರಾದ  ಡಾ. ಮನ್ಸೂರ್ ಹಾಗೂ ಮೆಹಬೂಬ್ ಭಾಷಾ, ಬಸವರಾಜ್, ಪ್ರದೀಪ್, ಎಸ್. ಎಂ. ರಿಯಾಜ್ ಪಾಶ, ಜಗದೀಶ್, ಸುರೇಶ್, ದಾದಾಪಿರ್, ಸುಭಾಷ್, ಗಿರೀಶ್, ರಮೇಶ್, ಶೇಕ್ಷವಲಿ, ಪ್ರಭಾಕ್, ರಾಘವೇಂದ್ರ, ನಾಗರಾಜ್,ಪರಶುರಾಮ್, ಉದಯ, ಉಪಸ್ಥಿತರಿದ್ದರು.