
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.09: ತಾಲ್ಲೂಕಿನ ಸಂಜೀವರಾಯನಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿದ ಹಳೇ ವಿದ್ಯಾರ್ಥಿ ಮಹಾರಾಜ ವಾಲ್ಮೀಕಿ,ಒಂದರಿಂದ ಎಂಟನೇ ತರಗತಿವರೆಗೆ ಓದುತ್ತಿರುವ 422 ವಿದ್ಯಾರ್ಥಿಗಳಿಗೆ ಸುಮಾರು ಇಪ್ಪತ್ತೈದು ಸಾವಿರ ರೂಪಾಯಿ ವೆಚ್ಚದಲ್ಲಿ ಜಾಮಿಟ್ರಿ ಬಾಕ್ಸ್, ಪುಸ್ತಕ, ಪೆನ್, ಗ್ರಾಪ್ ಗಳನ್ನು ಕೊಂಡುತಂದು, ತಂದೆ ತಿಪ್ಪಯ್ಯ,ತಾಯಿ ಲಕ್ಷ್ಮಿ ಜೊತೆ ಬಂದು ಮಕ್ಕಳಿಗೆ ಉಚಿತವಾಗಿ ವಿತರಿಸಿದ್ದಾರೆ.
ನಂತರ ಮಾತನಾಡಿದ ಮುಖ್ಯಗುರು ರವಿಚೇಳ್ಳಗುರ್ಕಿ ಹಳೆ ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳು, ಸಿರಿವಂತರು,ದಾನಿಗಳು ಸರ್ಕಾರಿ ಶಾಲೆಗೆ ಸಹಾಯ ಮಾಡುವುದರಿಂದ ಬಡಮಕ್ಕಳಿಗೆ ಅನುಕೂಲವಾಗುತ್ತದೆ.ಇದರ ಸದುಪಯೋಗ ಪಡೆದ ನೀವು ಚೆನ್ನಾಗಿ ಓದಿ, ಕೆಲಸ ಪಡೆದು ಮುಂದೆ ಇನ್ನೊಬ್ಬರಿಗೆ ಸಹಾಯ ಮಾಡಬೇಕೆಂದರು.
ಮಹಾರಾಜ ಮತ್ತು ಕುಟುಂದವರನ್ನು ಇದೇ ಸಂದರ್ಭದಲ್ಲಿ ಗೌರವಿಸಿ,ಪ್ರಶಂಸಿಸಿದರು.
ಮುಖ್ಯ ಅತಿಥಿಗಳಾಗಿ ನರೇಂದ್ರ ಪಾಲ್ಗೊಂಡಿದ್ದರು. ಶಿಕ್ಷಕರಾದ ವಿ.ಬಸವರಾಜ, ದಿಲ್ಷಾದ್ ಬೇಗಂ, ಮೋದಿನ್ ಸಾಬ್, ಚನ್ನಮ್ಮ, ಸುಮತಿ, ಶ್ವೇತಾ, ಉಮ್ಮೆಹಾನಿ, ಶಶಮ್ಮ, ರಾಮಾಂಜಿನೇಯ ಮುಂತಾದವರು ಉಪಸ್ಥಿತರಿದ್ದರು.