ಹಳೇ ವಿದ್ಯಾರ್ಥಿಯಿಂದ ಶಾಲೆಗೆ ದೇಣಿಗೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜೂ.08 : ತಾಲ್ಲೂಕಿನ ಸ.ಹಿ.ಪ್ರಾ.ಶಾಲೆ, ಹಿರೇಹಾಳ್ ಶಾಲೆಗೆ 21000 ರೂಪಾಯಿ ಮೌಲ್ಯದ ಪ್ರಿಂಟರ್, ಸ್ಕ್ಯಾನರ್, ಜೆರಾಕ್ಸ್ ಮತ್ತು ಮೊಬೈಲ್ ವೈಫೈ ಮೂಲಕ ಪ್ರಿಂಟ್ ತೆಗೆಯಬಹುದಾದ ಅತ್ಯಾಧುನಿಕ ತಂತ್ರಜ್ಞಾನದ ಹೊಸ ಪ್ರಿಂಟರನ್ನು ನೂತನವಾಗಿ ಆಯ್ಕೆಯಾಗಿ ಜಿ.ಪಿ.ಟಿ ಗಣಿತ ಶಿಕ್ಷಕರಾಗಿ ನೇಮಕಾತಿ ಹೊಂದಿ ಹಳೇ ವಿದ್ಯಾರ್ಥಿ ಶಬಾನ ರವರು ತಮ್ಮ ಮೊದಲ ವೇತನದಲ್ಲಿ ಸವಿನೆನಪಿಗಾಗಿ ತಾಲ್ಲೂಕಿನ ಬಿಸಿಯೂಟ ಸಹಾಯಕ ನಿರ್ದೇಶಕ ರಾಮ್ ಮೋಹನ್ ಬಾಬು ಸಮ್ಮುಖದಲ್ಲಿ ಮುಖ್ಯಗುರು ಬಸವರಾಜ್ ರವರಿಗೆ ದೇಣಿಗೆಯನ್ನು ಹಸ್ತಾಂತರಿಸಲಾಯಿತು.