ಹಳೇ ಮನೆಯ ತ್ಯಾಜ್ಯ ವಸ್ತುಗಳ ನಿಗದಿತ ಸ್ಥಳದಲ್ಲಿ ವಿಲೇವಾರಿ ಮಾಡಿ

ಸಂಜೆವಾಣಿ ವಾರ್ತೆ

ಜಗಳೂರು.ಜು.೯-: ಪಟ್ಟಣದಲ್ಲಿನ ಹಳೇ‌ ಕಟ್ಟಡ ದ ಘನತ್ಯಾಜ್ಯ ಮಣ್ಣನ್ನು ನಿಗದಿತ ಸ್ಥಳದಲ್ಲಿ ವಿಲೆವಾರಿ ಮಾಡಲು ಪಟ್ಟಣಪಂಚಾಯಿತಿ ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಅವರು ಕಟ್ಟಡ ಕಾರ್ಮಿಕ ಗುತ್ತಿಗೆದಾರರಿಗೆ ಖಡಕ್ ಎಚ್ಚರಿಕೆ ನೀಡಿದರು.ಪಟ್ಟಣದ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಗೃಹ ಕಟ್ಟಡ ಕಾಮಗಾರಿ ಗುತ್ತಿಗೆದಾರರಿಗೆ ಕರೆದಿದ್ದ ಸಭೆಯಲ್ಲಿ ಅವರು ಮಾತ ನಾಡಿದರು.ಪಟ್ಟಣದ ವಿವಿದೆಡೆ ಹಳೇ ಮನೆಗಳನ್ನು ನೆಲಸಮಮಾಡಿದ ವೇಳೆ ತ್ಯಾಜ್ಯ ಮಣ್ಣು ಹಾಗೂ ಇತರೆ ವಸ್ತುಗಳನ್ನು ಪಟ್ಟಣದ ಮರೇನಹಳ್ಳಿ ರಸ್ತೆ,ಕೊಟ್ಟೂರು ಮುಖ್ಯರಸ್ತೆಗಳಲ್ಲಿ ಹಾಕುವುದರಿಂದ ವಾಯು ವಿಹಾರಿಗಳಿಗೆ ಮತ್ತು ವಾಹನ ಸಂಚಾರಿಗಳಿಗೆ ತೀವ್ರ ಅಡಚಣೆ ಉಂಟಾಗಿದೆ.ಇದರಿಂದ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸುತ್ತಿ ದ್ದಾರೆ. ಮನೆನಿರ್ಮಾಣದ ಗುತ್ತಿಗೆದಾರರು ಹಾಗೂ ಮಾಲೀಕರು, ಕಾರ್ಮಿಕ ಸಂಘಟನೆ ಮುಖಂಡರುಗಳು ಜಾಗೃತರಾಗಿ ಪಟ್ಟಣ ಪಂಚಾಯಿತಿ ನಿಗದಿಪಡಿಸಿದ ಸ್ಥಳದಲ್ಲಿ ಒಂದೆಡೆ ಸಂಗ್ರಹಮಾಡ ಬೇಕು ಎಂದು ತಿಳಿಸಿದರು.ಮರೇನಹಳ್ಳಿ ರಸ್ತೆಯಲ್ಲಿ ಸರ್ವೆ ನಂಬರ್ 51 ಸ್ಥಳ ಮೀಸಲು :- ತಾತ್ಕಾಲಿಕವಾಗಿ ತಾಲೂಕು ದಂಡಾಧಿಕಾರಿಗಳ ಆದೇಶದಂತೆ ಪಟ್ಟಣದ ಮರೇನಹಳ್ಳಿ ರಸ್ತೆಯ 51 ನೇ ಸರ್ವೆ ನಂಬರ್ ನ ಕಲ್ಲುಕ್ವಾರಿಯ ಖಾಲಿ ತಗ್ಗಾದ ಪ್ರದೇಶವನ್ನು ಗುರುತಿಸಿ ಮೀಸಲಿಡ ಲಾಗಿದೆ.ತ್ಯಾಜ್ಯ ಮಣ್ಣು ಇತರೆ ವಸ್ತುಗಳನ್ನು ವಿಲೆವಾರಿ ಮಾಡಬೇಕು ಎಂದು ಹೇಳಿದರು. ಪೌರಾಡಳಿತ ಇಲಾಖೆಯ ನಿಯಮಾವ ಳಿಯಂತೆ ಇಲಾಖೆಯ ಸೂಚನೆ ಪ್ರಕಟಣೆಗಳನ್ನು ಉಲ್ಲಂಘಿಸಿ ಎಲ್ಲೆಂದರಲ್ಲಿ ರಸ್ತೆ ಬದಿ ತ್ಯಾಜ್ಯ ವಸ್ತುಗಳನ್ನು ಹಾಕಿದರೆ ನಿರ್ದಾ ಕ್ಷೀಣ್ಯವಾಗಿ ಸೂಕ್ತ ಕಾನೂನು ಕ್ರಮ‌ಕೈಗೊಳ್ಳಲಾಗುವುದು ಎಂದರು.ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಕ ಖಿಫಾಯತ್,ಗೃಹ ನಿರ್ಮಾಣ ಗುತ್ತಿಗೆದಾರರಾದ,ಕಾರ್ಮಿಕ ಸಂಘಟನೆ ಮುಖಂಡರು ಇದ್ದರು‌.