
ಸಂಜೆವಾಣಿ ವಾರ್ತೆದಾವಣಗೆರೆ.ಆ.೧೩; ಫೋಟೋಗ್ರಾಫರ್ ಯೂತ್ಸ್ ವೆಲ್ಫೇರ್ ಅಸೋಸಿಯೇಷನ್ ದಾವಣಗೆರೆ ವತಿಯಿಂದ ವಿಶ್ವ ಛಾಯಾಗ್ರಹಕ ದಿನಾಚರಣೆ ಅಂಗವಾಗಿ ಹಳೇ ಕ್ಯಾಮರಗಳ ನೂರಾರು ವರ್ಷಗಳ ಇತಿಹಾಸ ಇರುವ ಕ್ಯಾಮೆರಾಗಳ ಪ್ರದರ್ಶನ ಸಮಾರಂಭ ಆ. 18 ಮತ್ತು 19 ರಂದು ದಾವಣಗೆರೆಯ ಗುರುಭವನ ದಲ್ಲಿ ಹಮ್ಮಿಕೊಳ್ಳಲಾಗಿದೆ ಈ ಹಿನ್ನೆಲೆಯಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದರು. ಈ ವೇಳೆ ದಾವಣಗೆರೆ ತಾಲೂಕು ಫೋಟೋಗ್ರಾಫರ್ ಯೂತ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀನಾಥ್ ಅಗಡಿ, ಜಿಲ್ಲಾಧ್ಯಕ್ಷರಾದ ವಿಜಯಕುಮಾರ್, ತಾಲೂಕು ಉಪಾಧ್ಯಕ್ಷರಾದ ತಿಪ್ಪೇಸ್ವಾಮಿ ಎಸ್ ಆರ್, ಎಚ್ ಕೆ ಸಿ ರಾಜು, ಖಜಾಂಚಿ ಮಲ್ಲಿಕಾರ್ಜುನ್ ಕೆಪಿ ನಾಗರಾಜ್ ಸಹ ಕಾರ್ಯದರ್ಶಿ ಅರುಣ ಬಿಪಿ . ಅರುಣ್ ಬಾಸಿಂಗ ,ಕಿರಣ್ ಕುಮಾರ್, ರುದ್ರಮ್ಮ, ಮಂಗಳಮ್ಮ, ಪ್ರಕಾಶ ಹಾಗೂ ಮಾಜಿ ಜಿಲ್ಲಾಧ್ಯಕ್ಷರಾದ ಶಂಭು, ನಿರ್ದೇಶಕರಾದ ಮಂದಾರ ಬಸವರಾಜ್, ಮಿಥುನ್ ಕಿಶೋರ್ ಉಪಸ್ಥಿತರಿದ್ದರು