ಹಳೇ ಕುಂದುವಾಡದಲ್ಲಿ ಪ್ರತಿಭಾ ಪುರಸ್ಕಾರ, ಬೆಳ್ಳಿ ಕಪ್ ವಿತರಣೆ

ಸಂಜೆವಾಣಿ ವಾರ್ತೆ

*ದಾವಣಗೆರೆ.ಸೆ.೨೭; ನಗರದ ಹಳೇ ಕುಂದುವಾಡದಲ್ಲಿ ಮನಾ ಯುವ ಬ್ರಿಗೇಡ್, ಜನತಾ ರಕ್ಷಣಾ ವೇದಿಕೆಯ ಆರನೇ ವಾರ್ಷಿಕೋತ್ಸವ ಬೆಳ್ಳಿ ಕಪ್ ಪ್ರಶಸ್ತಿ ಪ್ರದಾನ ಸಮಾರಂಭ, ಸರ್ಕಾರಿ ಶಾಲೆ, ಕಾಲೇಜಿನ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಟಾಪರ್ ಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿತ್ತು..ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಯಕೊಂಡ ಶಾಸಕ ಬಸವಂತಪ್ಪ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡುವುದು ಮಹತ್ವದ ಕೆಲಸವಾಗಿದೆ, ವಿದ್ಯಾರ್ಥಿಗಳಿಗೆ ಪ್ರೇರಣೆ ತುಂಬುವುದು ಅವಶ್ಯಕವಾಗಿದೆ, ಮನಾ ಯುವ ಬ್ರಿಗೇಡ್ ಪ್ರತಿಭಾ ಪುರಸ್ಕಾರ ಮಾಡುತ್ತಿರುವುದು ಶ್ಲಾಘನೀಯವಾಗಿದೆ, ವಿದ್ಯಾಭ್ಯಾಸಕ್ಕೆ ಹೆಚ್ಚು ಮಹತ್ವ ಕೊಡಬೇಕಿದೆ, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು, ಎಷ್ಟೆ ಡಿಗ್ರಿಗಳನ್ನು ಓದಿದವರು, ಮಾನವೀಯತೆ ಸಹಾಯ ಗುಣ ಇಲ್ಲ ಎಂದರೆ ಉಪಯೋಗವಿಲ್ಲ ಎಂದು ಕಿವಿ ಮಾತು ಹೇಳಿದರು..ನಾನು ಹಳೇ ಕುಂದುವಾಡದ ಮಣ್ಣಿನ ಮಗ, ನನ್ನದು ಮೂಲತ ಇದೇ ಊರು, ನಾವು ಹುಟ್ಟಿ ಬೆಳೆದಿದ್ದು ಇದೇ ಊರಿನಲ್ಲಿ, ಬಳಿಕ ಗಾಂಧಿ ನಗರಕ್ಕೆ ಹೋದೆವು, ನನ್ನ ಹೆಸರು ಕೆ.ಎಸ್ ಬಸವಂತಪ್ಪ, ಕೆ ಎಂದರೆ ಕುಂದುವಾಡ, ಎಸ್ ಎಂದರೆ ನಮ್ಮ ತಂದೆಯ ಹೆಸರು ಸಂಗಪ್ಪ, ಮಾಜಿ ಸಚಿವ ಹೆಚ್ ಆಂಜನೇಯ ನನ್ನ ಮಾವ, ಹೆಚ್ ಆಂಜನೇಯ ಅವರು ಹಳೇ ಕುಂದುವಾಡದಲ್ಲಿ ಶಾಲೆ ಆರಂಭಿಸಿದ್ದರು, ಸೈಕಲ್ ನಲ್ಲಿ ಬಂದು ಶಾಲೆ ನಡೆಸುತ್ತಿದ್ದರು, ಇನ್ನೂ ನನ್ನ ಹುಟ್ಟೂರು ಕುಂದುವಾಡಕ್ಕೆ ಬರಬೇಕು ಅಂದುಕೊಂಡಿದ್ದೆ, ಮನಾ ಯುವ ಬ್ರಿಗೇಡ್ ವೇದಿಕೆಯವರು ನನ್ನನ್ನೂ ಕರೆಯಿಸಿ ಗೌರವಿಸಿದ್ದು ಮರೆಯಲಾಗದ ಕ್ಷಣ ಎಂದು ಹಳೇ ನೆನಪು ಮೆಲುಕು ಹಾಕಿದರು.ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್ ಮಾತನಾಡಿ, ಮನಾ ಯುವ ಬ್ರಿಗೇಡ್, ಜರವೇ ಯಿಂದ ಪ್ರತಿ ವರ್ಷ ಕೆಪಿಎಲ್ ಟೂರ್ನಿ ಆಯೋಜನೆ ಮಾಡುತ್ತಾ ಬರುತ್ತಿದ್ದಾರೆ, ಸಂತೋಷದಿಂದ ಸೌಹಾರ್ದಯುತವಾಗಿ ಸಾಮರಸ್ಯದಿಂದ ಕ್ರಿಕೆಟ್ ಆಯೋಜನೆ ಮಾಡುತ್ತಿರುವುದು ಉತ್ತಮ ಬೆಳವಣಿಗೆ, ಈ ಭಾರೀ ರಾಜ್ಯದಲ್ಲೇ ಮೊದಲ ಭಾರೀಗೆ ಬೆಳ್ಳಿ ಕಪ್ ಕ್ರಿಕೆಟ್ ಟೂರ್ನಿ ಆಯೋಜಿಸಿರುವುದು ಹೆಮ್ಮೆಯ ವಿಚಾರ ಎಂದರು..ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ದಾಸ ಕರಿಯಪ್ಪ ಮಾತನಾಡಿ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿರುವುದು ಸಾರ್ಥಕ ಕೆಲಸ, ಅವರ ಭವಿಷ್ಯಕ್ಕೆ ಇಂತಹ ಕಾರ್ಯಕ್ರಮಗಳು ಬುನಾದಿ, ವಿದ್ಯಾರ್ಥಿಗಳು ಛಲದಿಂದ ಓದಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು..