ಹಳೇ ಕುಂದವಾಡ ಪ್ರೌಢಶಾಲೆ ಎಸ್‌ಡಿಎಂಸಿ ಅಧ್ಯಕ್ಷರಾಗಿ ಆಯ್ಕೆ

ದಾವಣಗೆರೆ.ಜ.೧೮: ದಾವಣಗೆರೆ ದಕ್ಷಿಣ ವಲಯದ ಹಳೇ ಕುಂದವಾಡ ಪ್ರೌಢಶಾಲಾ ವಿಭಾಗದ ಎಸ್‌ಡಿಎಂಸಿ ಅಧ್ಯಕ್ಷರಾಗಿ ಎಂ.ಎನ್. ಗುಡ್ಡಪ್ಪ ಹಾಗೂ ಉಪಾಧ್ಯಕ್ಷರಾಗಿ ಟಿ. ರಾಜಪ್ಪ ಆಯ್ಕೆಯಾಗಿದ್ದಾರೆ.ಪ್ರೌಢಶಾಲಾ ವಿಭಾಗದ ಗೌರವಾಧ್ಯಕ್ಷರೂ ಆದ ಶಾಸಕ ಎಸ್.ಎ. ರವೀಂದ್ರನಾಥ್ ಅವರ ಆದೇಶದಂತೆ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಕಾರ್ಯದರ್ಶಿಯಾಗಿ ಸಹ ಶಿಕ್ಷಕಿ ಕೆ. ಸುವರ್ಣಮ್ಮ ಆಯ್ಕೆಯಾಗಿದ್ದು, ಸದಸ್ಯರಾಗಿ ಎನ್. ಬಸವರಾಜ್, ಕೆಂಚಮ್ಮ, ನೇತ್ರಮ್ಮ, ಚಂದ್ರಪ್ಪ,ಹೆಚ್.ಎನ್. ಶಿವರಾಜ್ ಆಯ್ಕೆಯಾಗಿದ್ದಾರೆ.ಪದನಿಮಿತ ಸದಸ್ಯರಾಗಿ ಹೆಚ್.ಎಸ್. ಗುರುನಾಥ್, ಹೆಚ್. ತಿಪ್ಪಣ್ಣ, ರೇಣುಕಮ್ಮ, ಎ. ಶ್ವೇತ, ಗೌರಮ್ಮ, ಆಶಾ ಆಯ್ಕೆಯಾಗಿದ್ದಾರೆ. ನಾಮನಿರ್ದೇಶಿತ ಸದಸ್ಯರಾಗಿ ಎಂ. ಹನುಮಂತಪ್ಪ, ಹೆಚ್.ಜಿ. ಮಂಜಪ್ಪ, ಹೆಚ್. ಗಣೇಶಪ್ಪ, ಗೌಡ್ರು ಬಸವರಾಜಪ್ಪ, ಜೆ. ಮಾರುತಿ, ಅಕ್ಕಿ ಬಸವರಾಜ್, ಜೆ.ಸಿ. ದೇವರಾಜ್, ಕೆ. ಮಂಜುನಾಥ್, ಹೆಚ್. ಕೃಷ್ಣಪ್ಪ, ಹೆಚ್.ಬಿ. ಸಂಪತ್ ಕುಮಾರ್, ಮಧುನಾಗರಾಜ್, ಶ್ರೀನಿವಾಸ್, ಕೆ.ಜಿ. ಪ್ರಕಾಶ್, ಬಿ. ಅಣ್ಣಪ್ಪ, ಜೆ. ಮಹೇಶಪ್ಪ, ಮೋಹನ್, ನಾಗರಾಜಪ್ಪ, ರಮೇಶ್, ಪ್ರಭಾಕರ್ ಆಯ್ಕೆಯಾಗಿದ್ದಾರೆ.