ಹಳೇಯ ದಾವಣಗೆರೆ ಅಭಿವೃದ್ಧಿಗೆ ಕ್ರಮವಹಿಸದಿದ್ದರೆ ಬೀದಿಗಿಳಿದು ಹೋರಾಟ


ದಾವಣಗೆರೆ.ಅ.೨೯; ಹಳೇಯ ದಾವಣಗೆರೆ ಅಭಿವೃದ್ಧಿಗೆ ಮಹಾನಗರ ಪಾಲಿಕೆ ಕ್ರಮ ವಹಿಸದಿದ್ದರೆ, ಬೀದಿಗೆ ಇಳಿದು ಹೋರಾಟ ಮಾಡಲಾಗುವುದು ಎಂದು ಆಮ್ ಆದ್ಮಿ ಪಾರ್ಟಿ, ಕರ್ನಾಟಕ ಜನಶಕ್ತಿ, ಕರ್ನಾಟಕ ಸೋಷಿಯಲ್ ಸರ್ವಿಸ್ ಹಾಗೂ ಟಿಪ್ಪು ಸುಲ್ತಾನ್ ಟ್ರಸ್ಟ್ ಎಚ್ಚರಿಕೆ ನೀಡಿವೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಕರ್ನಾಟಕ ಜನಶಕ್ತಿ ಜಿಲ್ಲಾ ಸಂಚಾಲಕ ಸತೀಶ ಅರವಿಂದ್, ಹಳೇ ದಾವಣಗೆರೆ ಮತ್ತು ಹೊಸ ದಾವಣಗೆರೆ ಎಂಬ ವಿಂಗಡಣೆಯಿಂದ ನಗರದ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ ಎಂದು ಆರೋಪಿಸಿದರು. ಪಾಲಿಕೆಯ ಅಭಿವೃದ್ಧಿ ಕಾಮಗಾರಿಗಳು ಹೊಸ ಭಾಗಕ್ಕೆ ಮಾತ್ರ ಕೇಂದ್ರ|ಈ ಕೃತವಾಗಿದ್ದು, ಹಳೇ ದಾವಣಗೆರೆಯ ಸ್ಥಿತಿಯನ್ನು ಕೇಳುವ ವ್ಯವಧಾನವೂ ಪಾಲಿಕೆ ಆಯುಕ್ತರಿಗೆ ಇಲ್ಲವಾಗಿದೆ. ಹಳೇ ಭಾಗದ ಅಭಿವೃದ್ಧಿಗಾಗಿ ಕಳೆದ ಎರಡು ವರ್ಷಗಳಿಂದ ನಿರಂತರ ಪ್ರತಿಭಟನೆ ಮಾಡಿದ್ದರೂ ಸಹ ಮಹಾನಗರ ಪಾಲಿಕೆ ಸ್ಪಂದಿಸಿಲ್ಲ ಎಂದು ದೂರಿದರು.
ಅಖ್ತರ್ ರಜಾ ಸರ್ಕಲ್‌ನಿಂದ ಆರ್‌ಟಿಓ ಕಚೇರಿಯ ವರೆಗಿನ ರಿಂಗ್ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಬೀದಿ ದೀಪಗಳಿಲ್ಲ, ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ. ನಾಯಿ, ಹಂದಿಗಳ ಹಾವಳಿ ಮಿತಿ ಮೀರಿದೆ. ಈ ಎಲ್ಲಾ ಸಮಸ್ಯೆಗಳನ್ನು ಇನ್ನೂ ಮೂರು ತಿಂಗಳ ಒಳಗೆ ಬಗೆ ಹರಿಸಬೇಕು. ಇಲ್ಲದಿದ್ದರೆ, ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಎಎಪಿಯ ಆದಿಲ್ ಖಾನ್, ಜನಶಕ್ತಿಯ ಅಣ್ಣಪ್ಪ, ಕರ್ನಾಟಕ ಸೋಸಿಯಲ್ ಸರ್ವಿಸ್‌ನ ಹಯಾತ್, ಟಿಪ್ಪು ಟ್ರಸ್ಟ್‌ನ ಮೆಹಬೂಬ್ ಪಾಷಾ ಹಾಜರಿದ್ದರು.
೨೯ಡಿಪಿಹೆಚ್೧