ಹಳೇಕೋಟೆಯಲ್ಲಿ ನಿಯಮಬಾಹಿರ  ಕಲ್ಲು ಗಣಿಗಾರಿಕೆ ಬ್ಲಾಸ್ಟಿಂಗ್ ಜನರ ಆಕ್ರೋಶ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.31:  ಜಿಲ್ಲೆಯ ಸಿರುಗುಪ್ಪ ತಾಲೂಕಿನ ಹಳೇಕೋಟೆ ಗ್ರಾಮದಲ್ಲಿ ನಿಯಮಬಾಹಿರವಾಗಿ
ಕಲ್ಲು ಗಣಿಗಾರಿಕೆಗೆ ಕ್ವಾರಿಯಲ್ಲಿ  ದೊಡ್ಡ ಮಟ್ಟದ ಬ್ಲಾಸ್ಟ್ ಮಾಡಿರುವುದನ್ನು ವಿರೋಧಿಸಿ ಜನತೆ ಗಣಿಕಾರಿಕೆ ನಡೆಸಿದವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಬೆಟ್ಟದಲ್ಲಿ ನಿನ್ನೆ ಸಂಜೆ ಬ್ಲಾಸ್ಟ್ ನಿಂದಾಗಿ ದೊಡ್ಡ ಮಟ್ಟದ ಶಬ್ದ ಮತ್ತು ಸಿಡಿದ ಕಲ್ಲುಗಳ ಚೂರಿನಿಂದಾಗಿ  ಜನತೆ ಕಕ್ಕಾಬಿಕ್ಕಿಯಾಗಿದ್ದಾರೆ‌.
ಗುಡ್ಡದ ಬಂಡೆ ಕಲ್ಲುಗಳನ್ನು ತೆಗೆಯಲು  ಬ್ಲಾಸ್ಟ್ ಮಾಡೋದು ಸಾಮಾನ್ಯ. ಆದ್ರೆ ನಿನ್ನೆ ಸಂಜೆ  ದೊಡ್ಡ ಮಟ್ಟದಲ್ಲಿ ಬ್ಲಾಸ್ಟ್ ಆಗಿದ್ದು ಮನೆಗಳಲ್ಲಿ ‌ಇರೋ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಮನೆಗಳು ನಡುಗಿದ್ದು ಕಲ್ಲುಪುಡಿಯ ಹೊಗೆ ಮತ್ತು ಧೂಳು ಹಳೇಕೋಟೆ ಗ್ರಾಮವನ್ನು ಆವರಿಸಿತ್ತಂತೆ. ಅದಕ್ಕಾಗಿ ಗ್ರಾಮದ ಜನತೆ ಗಣಿಗಾರಿಕೆ ನಡೆಸದಂತೆ ರೊಚ್ಚಿಗೆದ್ದು ಗಣಿ ಪ್ರದೇಶಕ್ಕೆ ಮುತ್ತಿಗೆ ಹಾಕಿದ್ದರು. 
ತೆಕ್ಕಲಕೋಟೆ  ಪೊಲೀಸರು ಸ್ಥಳಕ್ಕೆ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ.