ಹಳೆ ವೈಷಮ್ಯಕ್ಕೆ ಸೌತೆಕಾಯಿ ಬೆಳೆನಾಶ

ಕೋಲಾರ, ಜೂ. ೫- ಕೂಲಿನಾಲಿ ಮಾಡಿಕೊಂಡು ಜೀವನ ಸಾಗಿಸಲು ಬೆಳೆಸಿದ್ದ ಸೌತೆಕಾಯಿ ತೋಟ ಮತ್ತು ಕಂಬಳಿ ತೋಟವನ್ನು ಕಿಡಿಗೇಡಿಗಳು ನಾಶ ಮಾಡಿರುವ ಘಟನೆ ಮೇಡಿಹಾಳಮ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಮೇಡಿಹಾಳದಲ್ಲಿ ಶನಿವಾರ ರಾತ್ರಿ ಸಮಯದಲ್ಲಿ ಎಂ.ಎಸ್.ನಾರಾಯಣಸ್ವಾಮಿ ಮತ್ತು ಎಂ.ಎಸ್.ರಮೇಶ್‌ರಿಗೆ ಸೇರಿದ ಸರ್ವೆ ನಂ ೧೨/೧.೩.೪.೬. ರ ಜಮೀನನಲ್ಲಿ ಯಾರೋ ಕಿಡಿಗೇಡಿಗಳು ರಾತ್ರಿ ಸಮಯದಲ್ಲಿ ತೋಟದ ಬಳಿ ಯಾರು ಇಲ್ಲದ ಸಮಯ ನೋಡಿ ಜೀವನೋಪಾಯಕ್ಕಾಗಿ ಬೆಳೆಸಿದ್ದ ಸೌತೆಕಾಯಿ ಗಿಡಗಳನ್ನು ಹಳೆ ವೈಷಮ್ಯದ ಹಿನ್ನಲೆ ಸಂಪೂರ್ಣ ನಾಶ ಮಾಡಿದ್ದು. ಜೊತೆಗೆ ರೇಷ್ಮೆ ಹಿಪ್ಪು ನೇರಳೆ ತೋಟದಲ್ಲಿ ನೀರಿನ ಪೈಪ್‌ಗಳನ್ನು ಒಡೆದು ಹಾಕಿದ್ದು ಲಕ್ಷಾಂತರ ರೂ. ನಷ್ಟವುಂಟಾಗಿರುವುದಾಗಿ ಕಣ್ಣೀರು ಹಾಕಿದರು.
ಇದೇ ಜಮೀನಿನ ಮೇಲ್ಬಾಗದಲ್ಲಿರುವ ಗ್ರಾಮದ ಮತ್ತೊಬ್ಬ ಮುನಿಶಾಮಪ್ಪರ ಸರ್ವೆ-೧೪.೨,೩,೭ ರಲ್ಲಿ ಒಂದೂವರೆ ಎಕರೆಗೆ ಹಾಕಿದ್ದ ಹಿಪ್ಪು ನೇರಳೆಯ ನೀರಿನ ಪೈಪ್ ಮತ್ತು ಗೇಟ್ ವಾಲ್‌ಗಳನ್ನು ನಾಶ ಮಾಡಿದ್ದಾರೆ ಎಂದು ಜಮೀನಿನ ರೈತರು ಆರೋಪಿಸಿದ್ದಾರೆ.
ಸುಮಾರು ೧೫ ವರ್ಷದಿಂದ ನಮ್ಮ ಜಮೀನು ಸುತ್ತ ಮುತ್ತ ಈ ರೀತಿಯ ಘಟನೆಗಳು ನಡೆದಿಲ್ಲ, ಆದರೆ ಇತ್ತೀಚೆಗೆ ಒಂದು ತಿಂಗಳ ಹಿಂದೆ ನಮ್ಮ ಮನೆಯ ಬಳಿ ರಸ್ತೆ ವಿಚಾರದಲ್ಲಿ ಪಕ್ಕದ ಮನೆಯವರು ನನ್ನ ಮೇಲೆ ದೌರ್ಜನ್ಯ ಮಾಡಿ ಗಲಾಟೆ ಮಾಡಿದ್ದರು. ಇದರ ವಿಚಾರವಾಗಿಯೇ ವೇಮಗಲ್ ಪೋಲಿಸ್ ಠಾಣೆಯಲ್ಲಿ ಕೇಸ್ ಕೂಡ ದಾಖಲಾಗಿದೆ. ಅವರೇ ಈ ಕೃತ್ಯ ಮಾಡಿರಬಹುದು ಎಂಬುದು ಅನುಮಾನವಾಗಿದೆ ಎಂದು ತೋಟದ ಮಾಲೀಕ ಎಂ.ಎಸ್.ನಾರಾಯಣಸ್ವಾಮಿ ಮತ್ತು ಎಂ.ಎಸ್ ರಮೇಶ್ ಆರೋಪಿಸಿದ್ದಾರೆ.
ಈ ವಿಚಾರವಾಗಿ ಅನುಮಾನವಿರುವ ಮೇಡಿಹಾಳ ಶ್ರೀನಿವಾಸ್, ನಾಗರಾಜ್, ನಾರಾಯಣಸ್ವಾಮಿ, ಚೌಡರೆಡ್ಡಿ ಎಂಬುವರ ಮೇಲೆ ವೇಮಗಲ್ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಇನ್ಸ್‌ಪೆಕ್ಟರ್ ವೆಂಕಟೇಶ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ ತನಿಖೆ ಮುಂದುವರೆಸಿದ್ದಾರೆ.