ಹಳೆ ವಿದ್ಯಾರ್ಥಿಗಳ ಸಮಾಗಮಗುರುವಂದನೆ ಕಾರ್ಯಕ್ರಮ

ಕೊಲ್ಹಾರ:ಮಾ.3: ಕಳೆದ ಬಾಲ್ಯ, ಕಲಿತ ಶಾಲೆ, ವಿದ್ಯೆ ನೀಡಿದ ಗುರುಗಳು, ಆಟ-ಪಾಠಗಳಲ್ಲಿ ಒಂದಾಗಿದ್ದ ಸಹಪಾಠಿಗಳ ಸುಮಧುರ ನೆನಪುಗಳ ಸಮಾಗಮ ಎಂತಹವರಿಗೂ ಖುಷಿ ನೀಡುತ್ತದೆ.
ಅಂತಹ ಒಂದು ಸುಮಧುರ ಘಳಿಗೆಗೆ ತಾಲೂಕಿನ ಕೂಡಗಿ ಸರ್ಕಾರಿ ಪ್ರೌಢ ಶಾಲೆ ಸಾಕ್ಷಿಯಾಯಿತು 1996-98 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳ ಸಮಾಗಮ ಹಾಗೂ ಗುರುವಂದನೆ ಕಾರ್ಯಕ್ರಮ ಜರುಗಿತು. ಹಳೆಯ ವಿದ್ಯಾರ್ಥಿಗಳೆಲ್ಲ ಒಂದೆಡೆ ಸೇರಿ ವಿದ್ಯಾರ್ಥಿ ಜೀವನದ ಸವಿ ನೆನಪುಗಳನ್ನು ಮೆಲಕು ಹಾಕುತ್ತಾ ಕಲಿಸಿದ ಗುರುಗಳಿಗೆ ವಂದನೆ ಸಲ್ಲಿಸಿದ್ದು ಅವಿಸ್ಮರಣೀಯ ಕ್ಷಣಗಳಲ್ಲೊಂದಾಗಿತ್ತು, ಕಲಿಸಿದ ಗುರುಗಳಲ್ಲಿ ಸಾರ್ಥಕತೆಯ ಭಾವ ಮನೆ ಮಾಡಿದರೆ ವಿದ್ಯಾರ್ಥಿಗಳ ಕಣ್ಣಲ್ಲಿ ಕೃತಜ್ಞತಾ ಭಾವ ಕಂಗೊಳಿಸಿತು.

ಸಾನಿಧ್ಯ ವಹಿಸಿದ್ದ ಅಭಿನವ ಸಂಗನಬಸವ ಶ್ರೀಗಳು ಆಶೀರ್ವಚನ ನೀಡುತ್ತಾ ವಿದ್ಯಾರ್ಥಿ ಜೀವನವೆಂಬುದು ಬೆಲೆ ಕಟ್ಟಲಾಗದ್ದು, ಪ್ರತಿ ವ್ಯಕ್ತಿಯ ಜೀವನದಲ್ಲಿ ಗುರುವಿನ ಪಾತ್ರ ಅಪಾರವಾಗಿರುತ್ತದೆ, ಅದಕ್ಕಾಗಿಯೇ ವಿದ್ಯಾರ್ಥಿ ಹಂತದ ಜೀವನ ಬಂಗಾರದ ಜೀವನ ಎಂದು ಕರೆಯಲ್ಪಡಲಾಗುತ್ತದೆ. ಶಿಕ್ಷಣ ಪಡೆದ ಶಾಲೆ ಹಾಗೂ ಶಿಕ್ಷಣ ನೀಡಿದ ಗುರುವಿಗೆ ಬೆಲೆಕೊಟ್ಟ ನಿಮ್ಮ ಔದಾರ್ಯ ಇತರರಿಗೆ ಪ್ರೇರಣಾದಾಯಕ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾ ಪಂ ಅಧ್ಯಕ್ಷೆ ಶ್ರೀಮತಿ ಹುಸೇನಬಿ ಮಾಶ್ಯಾಳ, ಗ್ರಾ.ಪಂ ಉಪಾಧ್ಯಕ್ಷ ಅರುಣ ನಾಯಕ, ನಿವೃತ್ತ ಉಪನ್ಯಾಸಕರಾದ ವಿ.ಬಿ. ಮುದಕವಿ, ಎ.ಎಸ್ ಕೋಟಿ, ಉಪನ್ಯಾಸಕ ಎಸ್.ಬಿ ಅಡಹಳ್ಳಿ, ವಿ.ಡಿ ಸಕ್ರಿ, ಎಂ.ಎಂ ಭಂಡಾರಿ, ಎಸ್.ಎಸ್ ಓತಗೇರಿ, ಡಿ.ಡಿ ಬಂಡೇನವರ, ಆರ್.ಎಲ್ ಪಾಟೀಲ್, ಎಂ.ವಿ ಹಿರೇಮಠ, ಎಸ್.ಎಂ ಗುಡದಿನ್ನಿ, ಎಸ್.ಆರ್ ಗುಗೇನವರ, ಆಶಾ ಚವಾಣ್, ಕೆ.ಜಿ ನಾಯಕ, ಜಿ.ಬಿ ಮಂಕಣಿ, ಎಸ್.ಬಿ ಕೊಲ್ಹಾರ, ಎಸ್.ಎಸ್ ಬೆಳ್ಳುಬ್ಬಿ ಹಾಗೂ ಇತರರು ಇದ್ದರು.