
ಯಡ್ರಾಮಿ:ಆ.14: ಸಾಥಖೇಡ ಗ್ರಾಮದಲ್ಲಿ ಹಳೆ ವಿದ್ಯಾರ್ಥಿಗಳ ಕೈಯಿಂದ ಮದುಮಗಳಂತೆ ಶೃಂಗಾರಗೊಂಡ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ.
ಖಾಸಗಿ ಶಾಲೆಗಳತ್ತ ಮುಖ ಮಾಡಿದ ಪಾಲಕರು ಸರ್ಕಾರಿ ಶಾಲೆಗಳಿಗೆ ಮಕ್ಕಳು ಕಳಿಸಲು ಹಿಂದೇಟು ಹಾಕುತ್ತಿದ್ದಾರೆ. ಕಾರಣ ಕಟ್ಟಡಗಳು ಸರಿಯಾಗಿಲ್ಲದಕ್ಕಾಗಿ ಸೌಂದರ್ಯ ಆಕರ್ಷಣೀಯ ಚಿತ್ರಗಳು ಬಿಡಿಸದೇ ಇರುವುದಕ್ಕಾಗಿ ಇಂದಿನ ಪಾಲಕರು ತಮ್ಮ ಮಕ್ಕಳಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಕಡೆಗೆ ಹೆಚ್ಚು ಒತ್ತು ಕೊಡುತ್ತಿದ್ದಾರೆ. ಖಾಸಗಿ ಶಾಲೆಗಳ ಕಟ್ಟಡಕ್ಕಿಂತ ಬಾಳ ಸೌಂದರ್ಯವಾಗಿ ಬಣ್ಣಗಳ ಲೇಪನ ಮಾಡಿದ ಹಳೆ ವಿದ್ಯಾರ್ಥಿಗಳ ತಂಡ ಶಾಲೆಯ ಕಟ್ಟಡ ಒಂದು ಮದುಮಗಳಂತೆ ಶೃಂಗಾರ ಗೊಳಿಸಿದ್ದಾರೆ.
“ಸರ್ಕಾರ ಇಂತಹ ಶಾಲೆಗಳನ್ನು ಗುರುತಿಸಿ ಅವುಗಳ ರಿಪೇರಿ ಮತ್ತು ಕಟ್ಟಡ ಸೌಂದರ್ಯೀಕರಣಕ್ಕೆ ಹೆಚ್ಚು ಹೊತ್ತು ನೀಡಬೇಕು ಹೈಸ್ಕೂಲ್ ಮಂಜೂರಾತಿ ನೀಡಬೇಕು ಮತ್ತು ಕ್ಲಾಸ್ ಗಳಿಗೆ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಮಾಡಬೇಕು ಎಂದು ಹಳೆ ವಿದ್ಯಾರ್ಥಿ ಈರಣ್ಣ ಪತ್ರಿಕೆ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.”
ತಾಲೂಕಿನ ಸಾಥಖೇಡ ಗ್ರಾಮದಲ್ಲಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸುಮಾರು 28ರಿಂದ 30 ವರ್ಷಗಳಿಂದ ಯಾವುದೇ ಸೌಂದರ್ಯೀಕರಣ ಕಾಣದೆ ಗೋಡೆಗಳು ಬಿರುಕು ಬಿಟ್ಟಿದ್ದವು ಜೊತೆಗೆ ಕಬ್ಬಿಣದ ಕಾಫಿ ಜಂತಿಗಳು ತುಕ್ಕು ಹಿಡಿದಿದ್ದವು ಗ್ರಾಮಸ್ಥರು ಮತ್ತು ಶಾಲೆಯ ಮುಖ್ಯ ಶಿಕ್ಷಕರು ಗ್ರಾಮ ಪಂಚಾಯಿತಿಗೆ ಹಾಗೂ ಸಂಬಂಧಪಟ್ಟ ಶಾಸಕರಿಗೆ ಮನವಿ ಮಾಡಿದರೂ ಕೂಡ ಶಾಲೆಯ ಕಟ್ಟಡ ಸೌಂದರ್ಯಕ್ಕೆ ಯಾವುದೇ ಹಣ ಬಿಡುಗಡೆ ಮಾಡಿಲ್ಲ. ಇದೇ ಶಾಲೆಯಲ್ಲಿ ಓದಿದ ಹಳೆ ವಿದ್ಯಾರ್ಥಿಗಳ ತಂಡ ಒಂದು ಶಾಲೆ ಸೌಂದರ್ಯೀಕರಣಕ್ಕೆ ಸಮ ಸ್ವಂತ ಖರ್ಚಿನಿಂದ ಬಣ್ಣವನ್ನು ಹಚ್ಚಿ ಮಾನವೀಯತೆ ಮೆರೆದಿದ್ದಾರೆ.
“ಹಳೆ ವಿದ್ಯಾರ್ಥಿಗಳ ಕೆಲಸಕ್ಕೆ ಗ್ರಾಮಸ್ಥರು ಮತ್ತು ಹಿರಿಯರು ಹಾಗೂ ಶಾಲೆಯ ಮುಖ್ಯ ಗುರುಗಳು ಮತ್ತು ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.”
“ಸರಕಾರಿ ಶಾಲೆಗಳು ಉಳಿಯಬೇಕಾದರೆ ಹಳೆ ವಿದ್ಯಾರ್ಥಿಗಳು ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಮಾತ್ರ ಸಾಧ್ಯ. ನಮ್ಮ ಶಾಲೆಯಲ್ಲಿ ಓದಿದ ಹಳೆ ವಿದ್ಯಾರ್ಥಿಗಳು ಶಾಲೆ ಸೌಂದರ್ಯಕ್ಕೆ ತಮ್ಮ ಸ್ವಂತ ಖರ್ಚಿನಿಂದ ಶಾಲೆ ಎಲ್ಲಾ ಕೋಣೆಗಳಿಗೆ ಸುಣ್ಣ ಮತ್ತು ಬಣ್ಣಗಳ ಲೇಪನ ಮಾಡಿದ್ದಾರೆ. ಇವರ ಒಂದು ಕಾರ್ಯ ತಾಲೂಕು ಮತ್ತು ಜಿಲ್ಲೆ ರಾಜ್ಯಗಳಿಗೆ ಮಾದರಿಯಾಗಿದೆ ಎಂದು ಶ್ರೀಮತಿ ಗಂಗೂಬಾಯಿ ಕುಲಕರ್ಣಿ ಮುಖ್ಯಶಿಕ್ಷಕಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.”