ಹಳೆ ವಿದ್ಯಾರ್ಥಿಗಳಿಂದ ಗುರುವಂದನೆ ಕಾರ್ಯಕ್ರಮ

ಚಿಂಚೋಳಿ,ನ.3: ತಾಲೂಕಿನ ಚಿಮ್ಮನಚೋಡ ಗ್ರಾಮದಲ್ಲಿ ಸರ್ಕಾರಿ ಪ್ರೌಢ ಶಾಲೆಯಲ್ಲಿ 2007ನೇ ಸಾಲಿನ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಯಾದ ನಾಗರಾಳ ಗ್ರಾಮದ ಸಿ,ಆರ್,ಪಿ,ಎಫ್. ಯೋಧ ಗುಂಡಪ್ಪ,ಶರಣಪ್ಪ,ಕಟ್ಟಿಮನಿ ಅವರಿಗೆ ಪ್ರೌಡ ಶಾಲಾ ಶಿಕ್ಷಕರಿಂದ ಸನ್ಮಾನಿಸಿದರು
ಈ ವಿದ್ಯಾರ್ಥಿಯು 8 ವರ್ಷಗಳ ಭಾರತ ಸೆನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಇದರಿಂದ ನಮ್ಮ ಶಾಲೆಗೆ ವಿದ್ಯಾರ್ಥಿ ಎಂದು ಹೇಳಲು ನಮಗೆ ಹೆಮ್ಮೆಯಾಗುತ್ತಿದೆ ಎಂದು ಶಿಕ್ಷಕರು ಸಂತೋಷಪಟ್ಟರು.
ಸನ್ಮಾನ ಕಾರ್ಯಕ್ರಮದಲ್ಲ್ಲಿ ಶಿಕ್ಷಕರಾದ ಶಿವಶರಣಪ್ಪ,ವಚ್ಚಾ.ರಾಘವೆಂದ್ರ,ಕುಲಕರ್ಣ ಸೇರಿ ಮತ್ತು ಅನೇಕ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.