ಹಳೆ ಮೈಸೂರು ಭಾಗದಿಂದ 15 ಸ್ಥಾನ ಗೆಲ್ಲುವ ನಿರೀಕ್ಷೆ

ಕನಕಪುರ, ಜು. ೩೦:ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಆಗುತ್ತಿಲ್ಲವೆಂಬ ಕೊರಗಿದೆ. ಮುಂಬರುವ ೨೦೨೩ ರ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಿಂದಲೇ ೧೫ ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಪಕ್ಷವನ್ನು ಬಲಿಷ್ಠಗೊಳಿಸಿ ಅಪಕೀರ್ತಿಯನ್ನು ಹೋಗಲಾಡಿಸುವುದಾಗಿ ಕರ್ನಾಟಕ ರೇಷ್ಮೆ ಉದ್ಯಮಿಗಳ ನಿಗಮ ಅಧ್ಯಕ್ಷ ಗೌತಮ್‌ಗೌಡ.ಎಂ ತಿಳಿಸಿದರು.
ತಾಲ್ಲೂಕಿನ ಮರಳವಾಡಿ ಹೋಬಳಿ ಹನುಮಂತನಗರದಲ್ಲಿನ ತಮ್ಮ ನಿವಾಸದಲ್ಲಿ ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಬುಧವಾರ ಪ್ರಥಮ ಸಭೆ ನಡೆಸಿದ ಅವರು ಮಾತನಾಡಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮಿಸನ್ ೧೫೦ ಗುರಿಯನ್ನಿಟ್ಟುಕೊಂಡಿದ್ದಾರೆ. ಅವರ ಸಂಕಲ್ಪವನ್ನು ಸಾಕಾರಗೊಳಿಸುವುದೇ ನಮ್ಮ ಸಂಕಲ್ಪ ಎಂದರು.
ರಾಜ್ಯ ಮತ್ತು ಕೇಂದ್ರ ಸರ್ಕಾರವು ಆನೇಕ ಜನಪರ ಕಲ್ಯಾಣ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದಾರೆ. ಪ್ರಧಾನಿ ಮೋಧಿಯವರು ದೂರದೃಷ್ಠಿಯಿಂದ ಕೆಲಸ ಮಾಡುತ್ತಿದ್ದಾರೆ. ಆದರೆ ನಾವು ಜನತೆಗೆ ತಿಳಿಸುವಲ್ಲಿ ಹಿಂದಿದ್ದೇವೆ. ಆಗಾಗಿ ಸರ್ಕಾರದ ಕಾರ್ಯಕ್ರಮವನ್ನು ಪ್ರತಿ ಮನೆಗೆ ತಲುಪಿಸುವುದು ಹಾಗೂ ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ತಿಳಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.
ನನಗೆ ಪಕ್ಷ ಅಧಿಕಾರವನ್ನು ಕೊಟ್ಟಿಲ್ಲ, ಜವಬ್ದಾರಿಯನ್ನು ಕೊಟ್ಟಿದೆ. ಆ ಜವಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ಕೆಲಸ ಮಾಡಲಾಗುವುದು. ರಾಮನಗರದಲ್ಲಿ ಇಲ್ಲಿಯವರೆಗೂ ಪಕ್ಷ ಗೆದಿಲ್ಲ, ಇಲ್ಲಿ ಸಂಘಟನೆ ಮಾಡುವುದು ಕಷ್ಟವೆಂಬ ಅಪವಾದವಿದೆ. ಪಕ್ಷದ ಕಾರ್ಯಕರ್ತರು ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷವನ್ನು ಸಂಘಟಿಸಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವುದೇ ನಮ್ಮ ಗುರಿ ಎಂದರು.
ಬಿಜೆಪಿ ಒಬಿಸಿ ರಾಜ್ಯ ಕಾರ್ಯದರ್ಶಿ ನಾಗರಾಜು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಮಲ್ಲಪ್ಪ ಮಾತನಾಡಿ ಎಲ್ಲರೂ ಒಟ್ಟಾಗಿ ದುಡಿದು ಪಕ್ಷವನ್ನು ಇಲ್ಲಿ ಅಧಿಕಾರಕ್ಕೆ ತರಬೇಕಿದೆ ಎಂದರು.
ಹೆಬ್ಬಿದಿರುಮೆಟ್ಟಿಲು ಈರೇಗೌಡ, ಕೊಳ್ಳಿಗನಹಳ್ಳಿ ಮರಿಯಪ್ಪ, ಹಾರೋಹಳ್ಳಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಶ್ರೀನಿವಾಸ್, ಪ್ರಗತಿಪರ ಶಾಲೆ ಶಿವನಂಜಪ್ಪ, ಬಿಡಬ್ಲ್ಯೂಎಸ್‌ಎಸ್‌ಬಿ ಶಿವನಂಜಪ್ಪ, ಗೋದೂರು ಶಿವಣ್ಣ, ಗುಳ್ಳಟ್ಟಿಕಾವಲ್ ಸೋಮಣ್ಣ, ಪೊಲೀಸ್ ಮುನಿಯಪ್ಪ, ಡಿ.ಎಂ.ಶೇಷಣ್ಣ, ಕಡಸಿಕೊಪ್ಪ ಬಾಲಾಜಿ, ಜಕ್ಕಸಂದ್ರ ಕುಮಾರ್ ರಾವ್, ಕುಮಾರ್, ಲಕ್ಷ್ಮಣ್ ಮೊದಲಾದವರು ಉಪಸ್ಥಿತರಿದ್ದರು.